ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು U-19 WC ಫೈನಲ್: 5ನೇ ಬಾರಿ ಚಾಂಪಿಯನ್ ಪಟ್ಟ ಏರಲು ಭಾರತ ಸಿದ್ಧ

ಆಂಟಿಗುವಾ: ಐಸಿಸಿ ಅಂಡರ್​-19 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತನ್ನ ಪ್ರಾಬಲ್ಯ ಮೆರೆಯಲು ಸಿದ್ಧವಾಗಿದೆ. ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆಗಿರುವ ಭಾರತದ ಅಂಡರ್​-19 ಕ್ರಿಕೆಟ್​ ತಂಡವು ಮತ್ತೊಂದು ಬಾರಿ ವಿಶ್ವ ಕಪ್ ಎತ್ತಿಹಿಡಿಯುವ ಭರವಸೆ ಮೂಡಿಸಿದೆ.

ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಅಂಡರ್​-19 ವಿಶ್ವಕಪ್ ಫೈನಲ್‌ ಪಂದ್ಯವು ನಡೆಯಲಿದೆ. ಮೊನ್ನೆ ನಡೆದ ಸಮೀ ಫೈನಲ್​​ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾವನ್ನ ಮಣಿಸಿ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಇಂದಿನ ಪಂದ್ಯದಲ್ಲಿ ಯಶ್ ಧುಳ್ ನಾಯಕತ್ವದ ಭಾರತ ತಂಡವು ಇಂಗ್ಲೆಂಡ್​ ತಂಡದ ಜೊತೆ ಸೆಣೆಸಲಿದೆ. ವಿಶೇಷ ಅಂದ್ರೆ ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಆಟಗಾರರು ಇದುವರೆಗೂ ಸೋಲನ್ನೇ ಕಂಡಿಲ್ಲ.

ಅಂಡರ್​19 ವಿಶ್ವಕಪ್​ ಟೂರ್ನಿಯ ಮೋಸ್ಟ್​​ ಸಕ್ಸಸ್​ಫುಲ್ ತಂಡವಾಗಿ ಭಾರತವು ಗುರುತಿಸಿಕೊಂಡಿದೆ. ಒಟ್ಟು 14 ಆವೃತ್ತಿಯ ಅಂಡರ್​ 19 ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ 8 ಭಾರಿ ಫೈನಲ್​ ಪ್ರವೇಶ ಮಾಡಿದೆ, 4 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ.

Edited By : Vijay Kumar
PublicNext

PublicNext

05/02/2022 10:41 am

Cinque Terre

23.79 K

Cinque Terre

1

ಸಂಬಂಧಿತ ಸುದ್ದಿ