ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ಆರಂಭವಾಗಲಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 6 ರನ್ ಗಳಿಸಿದರೆ ದೊಡ್ಡ ದಾಖಲೆ ಬರೆಯಲಿದ್ದಾರೆ.
ವಿರಾಟ್ ಕೊಹ್ಲಿ ಭಾರತದ ನೆಲದಲ್ಲಿ 5,000 ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಅವರಿಗಿಂತ ಮೊದಲು ಸಚಿನ್ ತೆಂಡೂಲ್ಕರ್ ಮಾತ್ರ ಭಾರತದ ಪರ ಈ ಸಾಧನೆ ಮಾಡಿದ್ದರು. ಸಚಿನ್ ಭಾರತದ ನೆಲದಲ್ಲಿ 164 ಪಂದ್ಯಗಳ 160 ಇನ್ನಿಂಗ್ಸ್‌ಗಳಲ್ಲಿ 6,976 ರನ್ ಗಳಿಸಿದ್ದಾರೆ.
ಆದರೆ ಭಾರತದ ನೆಲದಲ್ಲಿ 5,000 ರನ್ ಗಳಿಸಲು ಸಚಿನ್ 121 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಇನ್ನು ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದರೆ ಕೇವಲ 96 ಇನ್ನಿಂಗ್ಸ್‌ಗಳಲ್ಲಿ 5,000 ರನ್ ಪೂರೈಸಿ ಸಚಿನ್ ದಾಖಲೆಯನ್ನು ಮುರಿಯಲಿದ್ದಾರೆ. ಕೊಹ್ಲಿ ಭಾರತದ ನೆಲದಲ್ಲಿ ಇದುವರೆಗೆ 98 ಪಂದ್ಯಗಳ 95 ಇನ್ನಿಂಗ್ಸ್‌ಗಳಲ್ಲಿ 4,994 ರನ್ ಗಳಿಸಿದ್ದಾರೆ.
PublicNext
04/02/2022 10:00 pm