ಬರ್ಮಿಂಗ್ ಹ್ಯಾಮ್: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 24 ವರ್ಷಗಳ ಬಳಿಕ ಕ್ರಿಕೆಟ್ ಮರು ಪ್ರವೇಶ ಪಡೆಯಲಿದೆ.
ಕಾಮನ್‌ವೆಲ್ತ್ ಕ್ರೀಡಾಕೂಟವು ಬರ್ಮಿಂಗ್ ಹ್ಯಾಮ್ (ಇಂಗ್ಲೆಂಡ್)ನಲ್ಲಿ ಜುಲೈ 28ರಿಂದ ಆಗಸ್ಟ್ 8ರವರೆಗೆ ನಿಗದಿಯಾಗಿದೆ. ಐಸಿಸಿ ಒಟ್ಟು ಎಂಟು ತಂಡಗಳಿಗೆ (ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ಬಾರ್ಬಡೋಸ್, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ) ಟಿ20 ಮಾದರಿಯಲ್ಲಿ ಭಾಗವಹಿಸಲು ಅವಕಾಶ ನೀಡಿದೆ. ಇದು ಲೀಗ್-ಕಮ್-ನಾಕೌಟ್ ಮಾದರಿಯಲ್ಲಿ ನಡೆಯಲಿದೆ.
ಪಂದ್ಯಗಳು ಜುಲೈ 29 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಿಂದ ಪ್ರಾರಂಭವಾಗುತ್ತವೆ ಮತ್ತು ಆಗಸ್ಟ್ 7ರಂದು ಗೋಲ್ಡ್ ಮೆಡಲ್ ಪಂದ್ಯದೊಂದಿಗೆ ಕೊನೆಗೊಳ್ಳುತ್ತವೆ. ಇದೇ ವಿಚಾರವಾಗಿ ಐಸಿಸಿ ಮತ್ತು ಸಿಜಿಎಫ್ ಮಂಗಳವಾರ ಜಂಟಿ ಹೇಳಿಕೆ ನೀಡಿವೆ.
PublicNext
02/02/2022 08:27 am