ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2022: ಲೋಗೋ ಅನಾವರಣಗೊಳಿಸಿದ ಲಕ್ನೋ ಸೂಪರ್ ಜೈಂಟ್ಸ್​

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ 15ನೇ ಆವೃತ್ತಿಯಲ್ಲಿ ಎರಡು ಹೊಸ ತಂಡಗಳು ಕಾಣಿಸಿಕೊಳ್ಳಲಿವೆ. ಅದರಂತೆ ಈಗಾಗಲೇ ಲಕ್ನೋ ಫ್ರಾಂಚೈಸಿ ತಂಡಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಎಂದು ಹೆಸರಿಟ್ಟಿದ್ದಾರೆ. ಆದರೆ ಅಹಮದಾಬಾದ್ ತಂಡ ಇನ್ನೂ ಕೂಡ ಹೆಸರು ಫೈನಲ್ ಮಾಡಿಲ್ಲ. ಇದೀಗ ಲಕ್ನೋ ಸೂಪರ್ ಜೈಂಟ್ಸ್ ತನ್ನ ಲೋಗೋವನ್ನು ಕೂಡ ಅನಾವರಣಗೊಳಿಸುವ ಮೂಲಕ ಅಭಿಮಾನಿಗಳಿಗೆ ಸರ್​ಪ್ರೈಸ್ ನೀಡಿದ್ದಾರೆ.

ಆರ್‌ಪಿ ಸಂಜೀವ್ ಗೋಯೆಂಕಾ ಒಡೆತನದ ಲಕ್ನೋ ತಂಡವು ತನ್ನ ಲಾಂಛನದಲ್ಲಿ ಬ್ಯಾಟ್ ಮತ್ತು ಬಾಲ್​ಗಳ ಸಿಂಬಲ್​ಗಳನ್ನು ಬಳಸಿದ್ದು, ಅದರ ಮೇಲೆ ಗರುಡಾಕಾರದಲ್ಲಿ ತ್ರಿವರ್ಣ ಗರಿಗಳನ್ನು ಚಿತ್ರಿಸಲಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ಹಂಚಿಕೊಂಡಿರುವ ಲೋಗೋ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೊಸ ಲೋಗೋ ಪ್ರಾಚೀನ ಭಾರತದ ಪುರಾಣಗಳಿಂದ ಪ್ರೇರಿತವಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

Edited By : Vijay Kumar
PublicNext

PublicNext

31/01/2022 10:22 pm

Cinque Terre

149.35 K

Cinque Terre

1

ಸಂಬಂಧಿತ ಸುದ್ದಿ