ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊದಲ ಮಗುವನ್ನು ಸ್ವಾಗತಿಸಿದ ಯುವಿ- ಹಜೆಲ್ ಕೀಚ್ ದಂಪತಿ

ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟರ್‌ ಯುವರಾಜ್ ಸಿಂಗ್ ಅವರ ಪತ್ನಿ ಹಜೆಲ್ ಕೀಚ್ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ತಮ್ಮ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿರುವ ವಿಚಾರವನ್ನು ಯುವರಾಜ್ ಸಿಂಗ್ ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಿಸಿದ್ದಾರೆ.

"ದೇವರು ನಮಗೆ ಗಂಡು ಮಗುವನ್ನು ಆಶೀರ್ವದಿಸಿದ್ದಾನೆ ಎಂದು ನಮ್ಮ ಎಲ್ಲಾ ಅಭಿಮಾನಿಗಳು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಈ ಆಶೀರ್ವಾದಕ್ಕಾಗಿ ನಾವು ದೇವರಿಗೆ ಧನ್ಯವಾದ ಹೇಳುತ್ತೇವೆ. ನನ್ನ ಕುಟುಂಬದ ಚಿಕ್ಕವನನ್ನು ಜಗತ್ತಿಗೆ ಸ್ವಾಗತಿಸುವಾಗ ನೀವು ನಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ಬಯಸುತ್ತೇವೆ" ಎಂದು ಯುವರಾಜ್ ಸಿಂಗ್ ಹಾಗೂ ಹಜೆಲ್ ಕೀಚ್ ಇಬ್ಬರೂ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

2016ರಲ್ಲಿ ಯುವರಾಜ್ ಸಿಂಗ್, ಬಾಲಿವುಡ್ ನಟಿಯಾಗಿದ್ದ ಹಜೆಲ್ ಕೀಚ್ ಅವರನ್ನು ವಿವಾಹವಾಗಿದ್ದರು. ಯುವರಾಜ್ ಸಿಂಗ್, ಅಕ್ಟೋಬರ್ 2000 ರಲ್ಲಿ ಏಕದಿನ ಪಂದ್ಯ ಆಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಭಾರತದ ಪರವಾಗಿ 304 ಏಕದಿನ, 40 ಟೆಸ್ಟ್ ಹಾಗೂ 58 ಟಿ20 ಪಂದ್ಯವನ್ನು ಯುವರಾಜ್ ಸಿಂಗ್ ಆಡಿದ್ದಾರೆ. 2019ರ ಜೂನ್ 10 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದಾರೆ.

Edited By : Vijay Kumar
PublicNext

PublicNext

26/01/2022 07:47 am

Cinque Terre

27.8 K

Cinque Terre

2