ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಬರ್ ಅಜಮ್ ವರ್ಷದ ಪುರುಷರ ODI ಕ್ರಿಕೆಟಿಗ ಗೌರವಕ್ಕೆ ಆಯ್ಕೆ

ಐಸಿಸಿ ವರ್ಷದ ಪುರುಷರ ODI ಕ್ರಿಕೆಟಿಗ ಗೌರವಕ್ಕೆ ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಆಯ್ಕೆಯಾಗಿದ್ದಾರೆ.

ಬಾಬರ್ ವರ್ಷದ ಏಕದಿನ ಕ್ರಿಕೆಟಿಗ ಎನಿಸಿಕೊಂಡ ಮೊದಲ ಪಾಕಿಸ್ತಾನಿ ಆಟಗಾರರಾಗಿದ್ದಾರೆ. ವರ್ಷದ ODI ಕ್ರಿಕೆಟಿಗನ ರೇಸ್ ನಲ್ಲಿ ಸೇರ್ಪಡೆಗೊಂಡ ಶಕೀಬ್ ಅಲ್ ಹಸನ್, ಯೆನೆಮನ್ ಮಲಾನ್ ಮತ್ತು ಪಾಲ್ ಸ್ಟಿರ್ಲಿಂಗ್, 2021 ರಲ್ಲಿ ODI ಕ್ರಿಕೆಟ್ ನಲ್ಲಿ ಸಹ ಅದ್ಭುತ ಆಟ ಪ್ರದರ್ಶಿಸಿದ್ದಾರೆ.

ಬಾಬರ್ ಅಜಮ್ 2021 ರಲ್ಲಿ ಆರು ಪಂದ್ಯಗಳಲ್ಲಿ ಎರಡು ಶತಕಗಳ ಸಹಾಯದಿಂದ 405 ರನ್ ಗಳಿಸಿದರು. ಈ ಸಮಯದಲ್ಲಿ ಅವರ ಸರಾಸರಿ 67.50 ಆಗಿತ್ತು. ಕೇವಲ ಆರು ಏಕದಿನ ಪಂದ್ಯಗಳನ್ನು ಆಡಿದ್ದರೂ ಎರಡರಲ್ಲೂ ಅವರ ಪಾತ್ರ ದೊಡ್ಡದಿತ್ತು.

ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನ ತಂಡದ ನಾಯಕತ್ವ ವಹಿಸಿಕೊಂಡು ಯಶಸ್ಸು ಸಾಧಿಸಿದ್ದಾರೆ. ಅವರ ನಾಯಕತ್ವದಲ್ಲಿ ಪಾಕಿಸ್ತಾನವು ಐಸಿಸಿ ಟಿ20 ವಿಶ್ವಕಪ್ ನಲ್ಲಿ ಭಾರತವನ್ನು ಮೊದಲ ಬಾರಿಗೆ ಸೋಲಿಸಿತು. ಅವರು 2021 ರ ODI ತಂಡದ ನಾಯಕರಾಗಿ ಮತ್ತು ICC ಪ್ರಶಸ್ತಿಗಳಲ್ಲಿ T20 ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಪ್ರಸ್ತುತ ಐಸಿಸಿ ಶ್ರೇಯಾಂಕದಲ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ ಅಗ್ರ-10 ರ ಭಾಗವಾಗಿರುವ ಏಕೈಕ ಆಟಗಾರ ಬಾಬರ್. ಅವರು ಟೆಸ್ಟ್ ನಲ್ಲಿ ಒಂಬತ್ತನೇ, ODIನಲ್ಲಿ ಮೊದಲ ಮತ್ತು T20 ಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

Edited By : Nirmala Aralikatti
PublicNext

PublicNext

24/01/2022 05:29 pm

Cinque Terre

27.52 K

Cinque Terre

2

ಸಂಬಂಧಿತ ಸುದ್ದಿ