ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2ನೇ ಬಾರಿ ವರ್ಷದ ಮಹಿಳಾ ಕ್ರಿಕೆಟರ್​ ಪ್ರಶಸ್ತಿ ಪಡೆದ ಸ್ಮೃತಿ ಮಂಧಾನ

ದುಬೈ: ಭಾರತ ಮಹಿಳಾ ತಂಡದ ಆರಂಭಿಕ ಬ್ಯಾಟರ್​ ಸ್ಮೃತಿ ಮಂಧಾನ 2021ರ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್​ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಈ ವರ್ಷದಲ್ಲಿ ಐಸಿಸಿ ವಾರ್ಷಿಕ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಮಹಿಳಾ ಕ್ರಿಕೆಟರ್​ ಎಂಬ ಗೌರವಕ್ಕೆ ಪಾತ್ರರಾದರು.

2021ರಲ್ಲಿ 22ರ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 38.86ರ ಸರಾಸರಿಯಲ್ಲಿ ಒಂದು ಶತಕ ಮತ್ತು 5 ಅರ್ಧಶತಕಗಳ ಸಹಿತ 855 ರನ್​ ಸಿಡಿಸುವ ಮೂಲಕ ಸ್ಮೃತಿ ಮಂಧಾನ ವರ್ಷದ ಮಹಿಳಾ ಕ್ರಿಕೆಟರ್​ಗೆ ನೀಡುವ ರಚೇಲ್​ ಹೇಹೋ ಫ್ಲಿಂಟ್​​​​ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. 2018ರಲ್ಲೂ ಮಂಧಾನ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದರು.

Edited By : Vijay Kumar
PublicNext

PublicNext

24/01/2022 04:54 pm

Cinque Terre

85.44 K

Cinque Terre

1

ಸಂಬಂಧಿತ ಸುದ್ದಿ