ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದ ರಾಷ್ಟ್ರಗೀತೆ ವೇಳೆ ಕೊಹ್ಲಿ ಅಸಭ್ಯ ವರ್ತನೆ; ನೆಟ್ಟಿಗರಿಂದ ಕ್ಲಾಸ್

ಕೇಪ್‌ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದ ಸರಣಿಯಲ್ಲಿ ಭಾರತ ವೈಟ್‌ವಾಶ್‌ಗೆ ತುತ್ತಾಗಿ ಭಾರಿ ಮುಖಭಂಗ ಅನುಭವಿಸಿದೆ. ಇದರಿಂದಾಗಿ ಟೀಂ ಇಂಡಿಯಾ ವಿರುದ್ಧ ಅನೇಕ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ನಡುವೆ ವಿರಾಟ್ ಕೊಹ್ಲಿ ಅವರು ರಾಷ್ಟ್ರಗೀತೆ ವೇಳೆ ತೋರಿದ ಅಸಭ್ಯ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ.

ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡದ ಆಟಗಾರರು ಮೈದಾನದಲ್ಲಿ ನಿಂತು ರಾಷ್ಟ್ರಗೀತೆಗೆ ಗೌರವಕೊಡುವುದು ವಾಡಿಕೆ. ಅದರಂತೆ ನಿನ್ನೆ (ಭಾನುವಾರ) ಕೇಪ್​ಟೌನ್​ನ ನ್ಯೂಲೆಂಡ್ಸ್​ ಮೈದಾನದಲ್ಲಿ ಕೂಡ ರಾಷ್ಟ್ರಗೀತೆಯನ್ನು ಹಾಕಲಾಯಿತು. ಈ ಸಂದರ್ಭದಲ್ಲಿ ಕೊಹ್ಲಿ ರಾಷ್ಟ್ರಗೀತೆ ಹೇಳುವ ಬದಲು ಚೀವಿಂಗ್ ಗಮ್‌ ಜಗಿಯುತ್ತಾ ನಿಂತ್ತಿದ್ದರು. ಇದು ಲೈವ್‌ ಟೆಲಿಕಾಸ್ಟ್‌ ಕೂಡ ಆಗಿದೆ. ಇದನ್ನು ಕಂಡ ಅನೇಕ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಕೊಹ್ಲಿ ವಿರುದ್ಧ ಕಿಡಿ ಕಾರಿದ್ದಾರೆ.

ದೇಶಭಕ್ತಿಯನ್ನು ಸೂಚಿಸುವ ರಾಷ್ಟ್ರಗೀತೆ ವೇಳೆ ಚೀವಿಂಗ್ ಜಗಿಯುತ್ತಾ ನಿಂತಿರುವ ಈ ವ್ಯಕ್ತಿ ನಮ್ಮ ದೇಶದ ರಾಯಭಾರಿ ಎಂದು ಹೇಳಿ ಅನೇಕರು ಕಾಲೆಳೆದಿದ್ದಾರೆ. ಇನ್ನೂ ಕೆಲವರು ವಿರಾಟ್ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ.

Edited By : Vijay Kumar
PublicNext

PublicNext

24/01/2022 10:20 am

Cinque Terre

28.04 K

Cinque Terre

5

ಸಂಬಂಧಿತ ಸುದ್ದಿ