ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs SA 3rd ODI: ಚಹಾರ್ ಹೋರಾಟ ವ್ಯರ್ಥ: ಟೀಂ ಇಂಡಿಯಾಗೆ ವೈಟ್‌ವಾಶ್‌ ಮುಖಭಂಗ

ಕೇಪ್ ಟೌನ್: ದೀಪಕ್ ಚಹಾರ್ ಹೋರಾಟದಿಂದ ಭಾರಿ ಕುತೂಹಲ ಕೆರಳಿಸಿದ್ದ ಇಂದಿನ ಪಂದ್ಯದಲ್ಲಿ ಕೊನೆಗೂ ದಕ್ಷಿಣ ಆಫ್ರಿಕಾ ತಂಡವು ಕೇವಲ 4 ರನ್‌ಗಳಿಂದ ಗೆಲುವಿನ ನಗೆ ಬೀರಿದೆ. ಇದರಿಂದಾಗಿ 3-0 ಅಂತರದಿಂದ ಸರಣಿ ಕೈಚೆಲ್ಲಿಕೊಂಡ ಟೀಂ ಇಂಡಿಯಾ ವೈಟ್‌ವಾಶ್‌ ಮುಖಭಂಗಕ್ಕೆ ತುತ್ತಾಗಿದೆ.

ಕೇಪ್ ಟೌನ್ ನ್ಯೂಲ್ಯಾಅಮಡ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ಕೆ.ಎಲ್. ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು 49.5 ಓವರ್‌ಗಳಲ್ಲಿ ಎಲ್ಲ 10 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತ್ತು.

288 ರನ್‌ಗಳ ಗುರಿ ಬೆನ್ನತ್ತಿದ ಭಾರತವು 49.2. ಓವರ್‌ಗಳಲ್ಲಿ ಎಲ್ಲಾ 10 ವಿಕೆಟ್ ಕಳೆದುಕೊಂಡು 283 ರನ್‌ ಗಳಿಸಲು ಶಕ್ತವಾಯಿತು. ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ 65 ರನ್, ಶಿಖರ್ ಧವನ್ 61 ರನ್, ದೀಪಕ್ ಚಹಾರ್ 54 ರನ್ ಚೆಚ್ಚಿದರು. ದೀಪಕ್ ಚಹಾರ್ ಬ್ಯಾಟಿಂಗ್ ಅಷ್ಟೇ ಅಲ್ಲದೆ ಬೌಲಿಂಗ್ ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು.

ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ 124 ರನ್, ರಾಸ್ಸಿ ವ್ಯಾನ್ ಡೆರ್ ಡುಸೆನ್ 52 ರನ್, ಡೇವಿಡ್ ಮಿಲ್ಲರ್ 39 ರನ್‌ ಗಳಿಸಿದ್ದರು. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ದರು.

ಕನ್ನಡಿಗ ಪ್ರಸಿದ್ಧ ಕೃಷ್ಣ 3 ವಿಕೆಟ್ ಕಿತ್ತು ಮಿಂಚಿದರೆ, ದೀಪಕ್ ಚಹರ್ ಹಾಗೂ ಜಸ್‌ಪ್ರೀತ್ ಬುಮ್ರಾ ತಲಾ 2 ವಿಕೆಟ್, ಯಜುವೇಂದ್ರ ಚಹಾಲ್ 1 ವಿಕೆಟ್ ಪಡೆದು ತಂಡಕ್ಕೆ ಆಸರೆಯಾಗಿದ್ದರು.

Edited By :
PublicNext

PublicNext

23/01/2022 10:36 pm

Cinque Terre

49.99 K

Cinque Terre

0