ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2022ರ ಐಪಿಎಲ್ ಭಾರತದಲ್ಲೇ ನಡೆಸಲು ತೀರ್ಮಾನ; ವರದಿ

ನವದೆಹಲಿ: ಇಂಡಿಯನ್ ಪ್ರೀಮಿಯರ್​ ಲೀಗ್​ನ 2022ನೇ ಆವೃತ್ತಿಯನ್ನು ಭಾರತದಲ್ಲೇ ನಡೆಸಲು ಫ್ರಾಂಚೈಸಿ ಮಾಲೀಕರು ಶನಿವಾರ ನಡೆದ ಬಿಸಿಸಿಐ ಸಭೆಯಲ್ಲಿ ಸಲಹೆ ನೀಡಿದ್ದಾರೆ. 15ನೇ ಆವೃತ್ತಿಗಾಗಿ ಮುಂಬೈ ಅಥವಾ ಪುಣೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.

"2022ರ ಐಪಿಎಲ್ ಟೂರ್ನಿಯು ಭಾರತದಲ್ಲಿಯೇ ಮುಚ್ಚಿದ ಅಂಗಣಗಳಲ್ಲಿ ಆಯೋಜಿಸಲಾಗುತ್ತದೆ. ಮುಂಬೈನಲ್ಲಿರುವ ವಾಂಖೆಡೆ ಸ್ಟೇಡಿಯಂ, ಕ್ರಿಕೆಟ್‌ ಕ್ಲಬ್‌ ಆಫ್‌ ಇಂಡಿಯಾ(ಸಿಸಿಐ), ಡಿವೈ ಪಾಟಿಲ್‌ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ. ಅಗತ್ಯ ಬಿದ್ದರೆ ಪುಣೆಯಲ್ಲಿನ ಕ್ರೀಡಾಂಗಣದಲ್ಲಿಯೂ ಆಯೋಜಿಸಲಾಗುತ್ತದೆ. ಒಂದು ವೇಳೆ ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಜಾಸ್ತಿಯಾದರೆ, ಎರಡನೇ ಆಯ್ಕೆಯಾಗಿ ಯುಎಇ ಮತ್ತು ಮೂರನೇ ಆಯ್ಕೆಯಾಗಿ ದಕ್ಷಿಣ ಆಫ್ರಿಕಾವನ್ನು ಇಟ್ಟುಕೊಳ್ಳಲಾಗಿದೆ" ಎಂದು ಮೂಲಗಳು ತಿಳಿಸಿವೆ.

Edited By : Vijay Kumar
PublicNext

PublicNext

22/01/2022 08:06 pm

Cinque Terre

66.74 K

Cinque Terre

0

ಸಂಬಂಧಿತ ಸುದ್ದಿ