ನವದೆಹಲಿ: ಟೀಂ ಇಂಡಿಯಾದ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನ ಹೊಸ ಫ್ರಾಂಚೈಸಿ ಲಕ್ನೋ ಭಾರಿ ಮೊತ್ತಕ್ಕೆ ತನ್ನತ್ತ ಸೆಳೆದುಕೊಂಡಿದ್ದು, 17 ಕೋಟಿ ರೂ. ಸಂಭಾವನೆ ನೀಡಲು ಮುಂದಾಗಿದೆ. ಈ ಮೂಲಕ ಕನ್ನಡಿಗ ಕೆ.ಎಲ್ ರಾಹುಲ್ ಐಪಿಎಲ್‌ನಲ್ಲಿ ಗರಿಷ್ಠ ಮೊತ್ತಕ್ಕೆ ಬಿಕರಿಯಾದ ಎರಡನೇ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.
ಟೀಂ ಇಂಡಿಯಾ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ 2018ರ ಸೀಸನ್‌ನಲ್ಲಿ ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತಕ್ಕೆ ಆರ್‌ಸಿಬಿ ರೀಟೈನ್ ಮಾಡಿಕೊಂಡಿತ್ತು. 2018ರ ಐಪಿಎಲ್ ಹರಾಜು ಸಂದರ್ಭದಲ್ಲಿ ಆರ್‌ಸಿಬಿ ಕೊಹ್ಲಿಗೆ 17ಕೋಟಿ ನೀಡಿ ತನ್ನ ತಂಡದಲ್ಲೇ ಉಳಿಸಿಕೊಂಡಿತು. ಆದ್ರೀದ ಅದಾದ ಬಳಿಕ ಕೆ.ಎಲ್ ರಾಹುಲ್ ಅವರನ್ನ ಹೊಸ ಫ್ರಾಂಚೈಸಿ ಲಕ್ನೋ ಬರೋಬ್ಬರಿ 17 ಕೋಟಿಗೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.
ಕೆ.ಎಲ್ ರಾಹುಲ್ ಜೊತೆಗೆ ಆಸ್ಟ್ರೇಲಿಯಾದ ಆಲ್ ರೌಂಡರ್ ಮಾರ್ಕಸ್ ಸ್ಟೊಯ್ನಿಸ್ ಮತ್ತು ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಮುಂಬರುವ ಐಪಿಎಲ್ 2022 ಋತುವಿನಲ್ಲಿ ಹೊಸ ಫ್ರಾಂಚೈಸಿ ಲಕ್ನೋವನ್ನು ಪ್ರತಿನಿಧಿಸಲಿದ್ದಾರೆ.
PublicNext
22/01/2022 03:52 pm