ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲೆಜೆಂಡರಿ ಮಾಜಿ ಫುಟ್ಬಾಲ್ ಆಟಗಾರ ಸುಭಾಷ್ ಭೌಮಿಕ್ ನಿಧನ

ಕೊಲ್ಕತ್ತಾ: ಭಾರತದ ಮಾಜಿ ಫುಟ್‌ಬಾಲ್‌ ಆಟಗಾರ ಸುಭಾಶ್ ಭೌಮಿಕ್ (72) ಅವರು ನಿಧನರಾಗಿದ್ದಾರೆ.

ಮಧುಮೇಹ ಹಾಗೂ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಬೆಳಗ್ಗೆ ಸುಭಾಶ್‌ ಭೌಮಿಕ್ ನಿಧನರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಸುಭಾಶ್ ನಿಧನಕ್ಕೆ ಕ್ರೀಡಾ ಕ್ಷೇತ್ರದ ದಿಗ್ಗಜರು, ಫುಟ್‌ಬಾಲ್‌ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ಮೂರೂವರೆ ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. 1970ರ ಏಷ್ಯನ್ ಗೇಮ್ಸ್‍ನಲ್ಲಿ ಭಾರತದ ಫುಟ್ಬಾಲ್ ತಂಡದಲ್ಲಿ ಆಟಗಾರರಾಗಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದಿತ್ತು. ಭೌಮಿಕ್ ಅವರು ಮೊಹಮ್ಮದನ್ ಸ್ಪೋರ್ಟಿಂಗ್, ಸಲ್ಗೋಕರ್, ಈಸ್ಟ್ ಬೆಂಗಾಲ್ ಸೇರಿದಂತೆ ಹಲವಾರು ದೊಡ್ಡ ಕ್ಲಬ್‍ಗಳಿಗೆ ಸ್ಟ್ರೈಕರ್ ಮತ್ತು ಆಟಗಾರರಾಗಿ ಆಡಿದ್ದರು. ಭೌಮಿಕ್ 1979ರಲ್ಲಿ ತಮ್ಮ ಆಟದ ವೃತ್ತಿ ಜೀವನದಿಂದ ನಿವೃತ್ತಿಗೊಂಡು, ತರಬೇತಿ ನೀಡಲು ಪ್ರಾರಂಭಿಸಿದ್ದರು. 2003ರಲ್ಲಿ ಪೂರ್ವ ಬಂಗಾಳದ ಎಎಸ್‍ಇಎಎನ್ ಪ್ರಶಸ್ತಿ ಹಾಗೂ ರಾಷ್ಟ್ರೀಯ ಲೀಗ್ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Edited By : Vijay Kumar
PublicNext

PublicNext

22/01/2022 03:09 pm

Cinque Terre

18.54 K

Cinque Terre

0

ಸಂಬಂಧಿತ ಸುದ್ದಿ