ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs SA 1st ODI: ಶಾರ್ದೂಲ್ ಹೋರಾಟ ವ್ಯರ್ಥ- ಹರಿಣರಿಗೆ 31 ರನ್‌ಗಳಿಂದ ಗೆಲುವು

ಪಾರ್ಲ್: ಶಿಖರ್ ಧವನ್, ವಿರಾಟ್ ಕೊಹ್ಲಿ ಹಾಗೂ ಶಾರ್ದೂಲ್ ಠಾಕೂರ್ ಅರ್ಧಶತಕದ ಆಟಕ್ಕೆ ನಾಯಕ ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್‌, ರಿಷಭ್ ಪಂತ್ ಸಾಥ್ ನೀಡದ ಹಿನ್ನೆಲೆಯಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾದ ಎದುರು 31 ರನ್‌ಗಳಿಂದ ಸೋಲು ಒಪ್ಪಿಕೊಂಡಿದೆ.

ಪಾರ್ಲ್‌ನ ಬೊಲ್ಯಾಂಡ್ ಪಾರ್ಕ್‌ನಲ್ಲಿ ಇಂದು ಭಾರತದ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಹರಿಣರ ತಂಡವು 4 ವಿಕೆಟ್‌ ನಷ್ಟಕ್ಕೆ 296 ರನ್‌ ಗಳಿಸಿತ್ತು. ದಕ್ಷಿಣ ಆಫ್ರಿಕಾದ ಪರ ನಾಯಕ ತೆಂಬಾ ಬವುಮಾ 110 ರನ್ ಹಾಗೂ ರಸಿ ವ್ಯಾನ್ ಡರ್ ಡಸೆನ್ ಅಜೇಯ 129 ರನ್ ಗಳಿಸಿದ್ದರು.

297 ರನ್‌ಗಳ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 265 ರನ್‌ ಗಳಿಸಲು ಶಕ್ತವಾಯಿತು. ಭಾರತ ಪರ ಶಿಖರ್ ಧವನ್ 79 ರನ್ ಹಾಗೂ ವಿರಾಟ್ 51 ರನ್ ಗಳಿಸಿದರು. ಉಳಿದಂತೆ ನಾಯಕ ಕೆ.ಎಲ್.ರಾಹುಲ್ 12 ರನ್, ಶ್ರೇಯಸ್ ಅಯ್ಯರ್‌ 17 ರನ್, ರಿಷಭ್ ಪಂತ್ 16 ರನ್, ವೆಂಕಟೇಶ್ ಅಯ್ಯರ್ 2 ರನ್‌ ಗಳಿಸಲು ಶಕ್ತರಾದರು.

ಕೊನೆಯಲ್ಲಿ ಶಾರ್ದೂಲ್ ಠಾಕೂರ್‌ (50 ರನ್‌) ಹೋರಾಟದಿಂದ ಭಾರತ ತಂಡವು ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡಿತು.

Edited By : Vijay Kumar
PublicNext

PublicNext

19/01/2022 10:05 pm

Cinque Terre

74.5 K

Cinque Terre

1

ಸಂಬಂಧಿತ ಸುದ್ದಿ