ಪಾರ್ಲ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಘಟಾನುಘಟಿಗಳ ದಾಖಲೆಗಳನ್ನು ಹಿಂದಿಕ್ಕಿದ್ದಾರೆ.
ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ 9 ರನ್ ಗಳಿಸುತ್ತಿದ್ದಂತೆ ವಿದೇಶಿ ನೆಲದಲ್ಲಿ ನಡೆದ ಏಕದಿನ ಕ್ರಿಕೆಟ್ನಲ್ಲಿ ಹೆಚ್ಚು ರನ್ಗಳಿಸಿದ ಬ್ಯಾಟರ್ ಎಂಬ ವಿಶೇಷ ದಾಖಲೆಗೆ ಪಾತ್ರರಾದರು. ಪ್ರಸ್ತುತ ಏಕದಿನ ಕ್ರಿಕೆಟ್ನಲ್ಲಿ 12,185 ರನ್ಗಳಿಸಿದ್ದು, ಇದರಲ್ಲಿ ವಿದೇಶದ ಏಕದಿನ ಸರಣಿಯಲ್ಲಿ 5,070 ರನ್ಗಳಿಸಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ 5,065 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದರು. ಇವರಿಬ್ಬರನ್ನು ಬಿಟ್ಟರೆ ಮಾಜಿ ನಾಯಕ ಎಂಎಸ್ ಧೋನಿ 3ನೇ ಸ್ಥಾನದಲ್ಲಿದ್ದು, 4,520 ರನ್ ಗಳಿಸಿದ್ದಾರೆ. ರಾಹುಲ್ ದ್ರಾವಿಡ್ (3,998 ರನ್) ಮತ್ತು ಗಂಗೂಲಿ (3,468) ರನ್ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.
ದ್ರಾವಿಡ್-ಗಂಗೂಲಿ ದಾಖಲೆ ಬ್ರೇಕ್:
ಸಚಿನ್ ದಾಖಲೆ ಮಾತ್ರವಲ್ಲ ದಕ್ಷಿಣ ಆಫ್ರಿಕಾ ಮತ್ತು ಭಾರತ ಮುಖಾಮುಖಿಯಾದ ವೇಳೆ ಗರಿಷ್ಠ ರನ್ ಸಿಡಿಸಿದ 2ನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಕೊಹ್ಲಿ 22 ರನ್ಗಳಿಸಿದ್ದ ವೇಳೆ ದ್ರಾವಿಡ್(1309) ಮತ್ತು 27 ರನ್ಗಳಿಸಿದ್ದ ವೇಳೆ ಗಂಗೂಲಿ(1313) ದಾಖಲೆ ಉಡೀಸ್ ಮಾಡಿದರು.
PublicNext
19/01/2022 08:26 pm