ಪಾರ್ಲ್: ನಾಯಕ ತೆಂಬಾ ಬವುಮಾ ಹಾಗೂ ರಸಿ ವ್ಯಾನ್ ಡರ್ ಡಸೆನ್ ಉತ್ತಮ ಜೊತೆಯಾಟದ ಸಹಾಯದಿಂದ ದಕ್ಷಿಣ ಆಫ್ರಿಕ ತಂಡವು ಭಾರತಕ್ಕೆ 297 ರನ್‌ಗಳ ಗುರಿ ನೀಡಿದೆ.
ಪಾರ್ಲ್‌ನ ಬೊಲ್ಯಾಂಡ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ನಾಯಕ ತೆಂಬಾ ಬವುಮಾ ಶತಕದ ಬಲ (110 ರನ್) ನೀಡಿದರು. ಬವುಮಾ ಹೋರಾಟಕ್ಕೆ ಡಸೆನ್ (ಅಜೇಯ 129 ರನ್) ಅಬ್ಬರದ ಬ್ಯಾಟಿಂಗ್ ಸಾಥ್ ನೀಡಿದರು. ಇದರೊಂದಿಗೆ ಹರಿಣರ ತಂಡವು 4 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು.
ಇನ್ನು ಭಾರತದ ಪರ ಜಸ್‌ಪ್ರೀತ್ ಬೂಮ್ರಾ ಎರಡು ವಿಕೆಟ್ ಹಾಗೂ ಆರ್. ಅಶ್ವಿನ್ ಒಂದು ವಿಕೆಟ್ ಉರುಳಿಸಲು ಶಕ್ತರಾದರು. ಉಳಿದಂತೆ ಶಾರ್ದೂಲ್ ಠಾಕೂರ್, ಭುವನೇಶ್ವರ್ ಕುಮಾರ್ ಹಾಗೂ ಯಜುವೇಂದ್ರ ಚಾಹಲ್ ವಿಕೆಟ್ ಪಡೆಯುವಲ್ಲಿ ವಿಫಲರಾದರು.
PublicNext
19/01/2022 06:06 pm