ಬೋಲ್ಯಾಂಡ್ ಪಾರ್ಕ್: ಟೀಂ ಇಂಡಿಯಾ ಅನುಭವಿ ಬ್ಯಾಟರ್ ಕೆ.ಎಲ್.ರಾಹುಲ್ ಮಾತುಗಳನ್ನು ವಿರಾಟ್ ಕೊಹ್ಲಿ ಕೇಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಕೆ.ಎಲ್.ರಾಹುಲ್ ಬೋಲ್ಯಾಂಡ್ ಪಾರ್ಕ್‌ನಲ್ಲಿ ತಂಡದ ಆಟಗಾರರನ್ನು ಉದ್ದೇಶಿಸಿ ಮಾತನಾಡುತ್ತಿರುವ ಫೋಟೋಗಳನ್ನು ಬಿಸಿಸಿಐ ಸೋಮವಾರ ಟ್ವೀಟ್ ಮಾಡಿದೆ. ಟೆಸ್ಟ್ ನಾಯಕತ್ವ ತ್ಯಜಿಸಿದ ವಿರಾಟ್ ಕೊಹ್ಲಿ ಹೇಗೆ ರಾಹುಲ್ ಮಾತು ಕೇಳುತ್ತಿದ್ದಾರೆ ಎಂದು ಬಳಕೆದಾರರು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಬಿಸಿಸಿಐ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕೆಲ ನೆಟ್ಟಿಗರು, 'ಕ್ಯಾಪ್ಟನ್ ಕೆಎಲ್ ಆನ್ ಡ್ಯೂಟಿ' ಎಂದು ಬರದುಕೊಂಡಿದ್ದಾರೆ. ಮತ್ತೊಬ್ಬರು 'ಜೀವನವು ಕೆಲವೊಮ್ಮೆ ಅನಿರೀಕ್ಷಿತವಾಗಿರುತ್ತದೆ' ಎಂದು ಕಮೆಂಟ್ ಮಾಡಿದ್ದಾರೆ.
PublicNext
17/01/2022 11:02 pm