ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧೋತಿ-ಕುರ್ತಾ ತೊಟ್ಟು ಕ್ರಿಕೆಟ್ ಆಡಿದ ತೆಲಂಗಾಣ ರೈತರು

ತೆಲಂಗಾಣ: ಇಲ್ಲಿ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಕ್ರೀಡೆಗಳನ್ನ ಆಡಲಾಗುತ್ತದೆ. ಆದರೆ ಈ ಸಲ ಇಲ್ಲಿಯ ರೈತರು ಕ್ರಿಕೆಟ್ ಆಡಿದ್ದಾರೆ. ಎಂದಿನ ತಮ್ಮ ಧೋತಿ-ಕುರ್ತಾ ಧರಿಸಿಯೇ ಯುವಕರ ಜೊತೆಗೆ ಕ್ರಿಕೆಟ್ ಆಡಿದ್ದಾರೆ. ಹಿಂದಿ ಬಿಬಿಸಿ ನ್ಯೂಸ್ ನಲ್ಲಿ ಇವರ ಈ ಕ್ರಿಕೆಟ್ ಆಟದ ಸುದ್ದಿ ಕೂಡ ಪ್ರಸಾರ ಆಗಿದೆ. ಬನ್ನಿ, ನೋಡೋಣ.

ತೆಲಂಗಾಣದ ಆದಿಲಾಬಾದ್‌ನ ರೈತರು ಉತ್ಸಾಹದಲ್ಲಿಯೇ ಕ್ರಿಕೆಟ್ ಆಡಿದ್ದಾರೆ. ತಮಗೆ 50 ವರ್ಷ ಮೀರಿದ್ದರೂ ಸರಿಯೇ. ನಾವೇನೂ ಕಮ್ಮಿ ಇಲ್ಲ ಅಂತಲೇ ಜಬರ್‌ದಸ್ತ್ ಆಗಿಯೇ ಮ್ಯಾಚ್ ಆಡಿದ್ದಾರೆ. ಇವರಿಗೆ ಇವರೇ ಸಾಟಿ ಅನ್ನೋ ಹಾಗೆ ಸಖತ್ ಫೀಲ್ಡಿಂಗ್ ಮಾಡಿದ್ದಾರೆ. ಅಷ್ಟೇ ಜೋಶ್‌ ನಲ್ಲಿಯೇ ಬ್ಯಾಟಿಂಗ್ ಕೂಡ ಮಾಡಿದ್ದಾರೆ.

ಕೇವಲ 8 ಓವರ್‌ಗಳ ಮ್ಯಾಚ್‌ ನಲ್ಲಿ ಯುವಕರ ತಂಡವೇ ಗೆದ್ದು ಬೀಗಿದೆ. ಆದರೆ ರೈತರ ತಂಡ ಸೋತರೂ ಉತ್ಸಾಹದ ಗೆಲುವಿನ ನಗೆ ಬೀರಿ, ಹಬ್ಬದ ಈ ಕ್ರಿಕೆಟ್ ಪಂದ್ಯಕ್ಕೆ ಹೊಸ ಕಳೆಯನ್ನೆ ತಂದು ಕೊಟ್ಟಿದೆ.

Edited By : Nagesh Gaonkar
PublicNext

PublicNext

17/01/2022 08:38 pm

Cinque Terre

47.8 K

Cinque Terre

1

ಸಂಬಂಧಿತ ಸುದ್ದಿ