ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ಟೆಸ್ಟ್‌ ತಂಡದ ನಾಯಕತ್ವಕ್ಕೂ ವಿರಾಟ್ ವಿದಾಯ

ನವದೆಹಲಿ: ಟೀಂ ಇಂಡಿಯಾ ಟಿ-20, ಏಕದಿನ ತಂಡದ ನಾಯಕತ್ವಕ್ಕೆ ಗುಡ್‌ಬೈ ಹೇಳಿದ್ದ ವಿರಾಟ್ ಕೊಹ್ಲಿ ಇಂದು ಟೆಸ್ಟ್ ತಂಡದ ನಾಯಕತ್ವ ಜವಾಬ್ದಾರಿಗೂ ವಿದಾಯ ಹೇಳಿದ್ದಾರೆ.

ಟ್ವೀಟ್ ಮೂಲಕ ತಮ್ಮ ಅಚ್ಚರಿಯ ನಿರ್ಧಾರವನ್ನು ವಿರಾಟ್ ಕೊಹ್ಲಿ ತಿಳಿಸಿದ್ದಾರೆ. "ಇದು ಏಳು ವರ್ಷಗಳ ಕಠಿಣ ಪರಿಶ್ರಮ ಹಾಗೂ ಪ್ರತಿದಿನದ ನಿರಂತರ ಪರಿಶ್ರಮದಿಂದಾಗಿ ತಂಡವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲುಸಾಧ್ಯವಾಗಿದೆ. ನಾನು ನನ್ನ ಕೆಲಸವನ್ನು ಸಂಪುರ್ಣ ಪ್ರಾಮಾಣಿಕತೆಯಿಂದ ಹಾಗೂ ನನ್ನ ಜವಾಬ್ದಾರಿಯ ಮೇಲೆ ಸ್ವಲ್ಪವೂ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸಿದ್ದೇನೆ. ಆದರೆ, ಎಲ್ಲಾ ಒಳ್ಳೆಯದಕ್ಕೂ ಯಾವುದೋ ಒಂದು ಹಂತದಲ್ಲಿ ಕೊನೆ ಎನ್ನುವುದು ಇದ್ದೇ ಇರುತ್ತದೆ. ಭಾರತ ಟೆಸ್ಟ್ ತಂಡದ ನಾಯಕನಾಗಿ ನನಗೆ ಈಗ ಬಂದಿದೆ" ಎಂದು ವಿರಾಟ್ ಕೊಹ್ಲಿ ಟ್ವಿಟರ್‌ನಲ್ಲಿ ಪ್ರಕಟಿಸಿರುವ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಭಾರತ ತಂಡದ ಮೂರೂ ಮಾದರಿಯ ಕ್ರಿಕೆಟ್‌ನ ನಾಯಕ ಸ್ಥಾನದಿಂದ ಕೆಳಗಿಳಿದಂತಾಗಿದೆ. ಏಕದಿನ ಹಾಗೂ ಟಿ20 ಮಾದರಿಯ ನಾಯಕತ್ವವನ್ನು ಈಗಾಗಲೇ ಬಿಸಿಸಿಐ, ರೋಹಿತ್‌ ಶರ್ಮಗೆ ನೀಡಿದ್ದರೆ, ಟೆಸ್ಟ್ ತಂಡಕ್ಕೆ ಯಾರು ನಾಯಕರಾಗಲಿದ್ದಾರೆ ಎನ್ನುವ ಕುತೂಹಲ ಈಗ ಆರಂಭವಾಗಿದೆ. ವಿರಾಟ್ 68 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, 40 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟು ಅತ್ಯಂತ ಯಶಸ್ವಿ ನಾಯಕರಾಗಿ ಹೊರ ಹೊಮ್ಮಿದ್ದಾರೆ.

Edited By : Vijay Kumar
PublicNext

PublicNext

15/01/2022 07:25 pm

Cinque Terre

72.91 K

Cinque Terre

16

ಸಂಬಂಧಿತ ಸುದ್ದಿ