ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಟೆಸ್ಟ್ ಪಂದ್ಯದ ಮೂರನೆ ದಿನದಂದು ಮೂರನೇ ಅಂಪೈರ್ ನೀಡಿದ ತೀರ್ಪಿಗೆ ವಿರಾಟ್ ಕೊಹ್ಲಿ ಉಗ್ರವಾಗಿ ವರ್ತಿಸಿದ್ದರು. ಸದ್ಯ ವಿರಾಟ್ ವರ್ತನೆಯನ್ನು ಮಾಜಿ ಕ್ರಿಕೆಟ್ ಆಟಗಾರ ಗೌತಂ ಗಂಭೀರ್ ಖಂಡಿಸಿದ್ದಾರೆ.
ಅಲ್ಲದೆ ಈ ಸಂದರ್ಭ ಕೊಹ್ಲಿ, ರಾಹುಲ್ ಕೆ. ಎಲ್ ಮತ್ತು ರವಿಚಂದ್ರನ್ ಅಶ್ವಿನ್ ಕಳಪೆ ಅಂಪೈರಿಂಗ್ ಕುರಿತು ಕೆಟ್ಟದಾಗಿ ಮಾತನಾಡಿದ್ದು ಸ್ಟಂಪ್ ಮೈಕಿನಲ್ಲಿ ಕೇಳಿಬಂದಿತ್ತು.ಘಟನೆ ಕುರಿತು ಪ್ರತಿಕ್ರಿಯಿಸಿರುವ ಗೌತಂ ಗಂಭೀರ್, ವಿರಾಟ್ ಕೊಹ್ಲಿ ಸ್ಟಂಪ್ ಮೈಕ್ ಬಳಿ ತೆರಳಿ ಅಂಪೈರ್ ಕುರಿತು ಕೆಟ್ಟದಾಗಿ ಮಾತನಾಡುವ ಅಗತ್ಯವಿರಲಿಲ್ಲ ಎಂದಿದ್ದಾರೆ.
ಈ ಬಗೆಯ ಉಗ್ರ ವರ್ತನೆಯಿಂದ ಯುವಪೀಳಿಗೆ ಮತ್ತು ಕ್ರೀಡಾಪಟುಗಳಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಅಲ್ಲದೆ ಈ ಬಗೆಯ ಸ್ವಭಾವದಿಂದ ಯಾರಿಗೂ ರೋಲ್ ಮಾಡೆಲ್ ಆಗಲು ಸಾಧ್ಯವಿಲ್ಲ ಎಂದು ಗೌತಂ ಗಂಭೀರ್ ಟೀಕಿಸಿದ್ದಾರೆ.
PublicNext
14/01/2022 10:39 pm