ಬೆಂಗಳೂರು:ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬಗ್ಗೆ ಟ್ವೀಟ್ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದ ತಮಿಳು ನಟ ಸಿದ್ಧಾರ್ಥ್ ಈಗ ಟ್ವಿಟರ್ ಮೂಲಕ ಕ್ಷಮೆ ಕೇಳಿದ್ದಾರೆ.ಆದರೆ ಸೈನಾ ನೆಹ್ವಾಲ್ ಈ ಬಗ್ಗೆ ಏನ್ ಹೇಳಿದ್ದಾರೆ ಗೊತ್ತೇ ? ಮುಂದೆ ಇದೆ ಓದಿ.
ಹೌದು ಒಬ್ಬ ಮಹಿಳೆಯನ್ನ ಈ ಥರ ಸಿದ್ಧಾರ್ಥ್ ಟಾರ್ಗೆಟ್ ಮಾಡಲೇ ಬಾರದಿತ್ತು. ಸಾಮಾಜಿಕ ತಾಣದಲ್ಲಿ ಹೀಗೆ ಹೇಳೇಬಾರದಿತ್ತು ಎಂದೇ ಸೈನಾ ಹೇಳಿದ್ದಾರೆ.
ಆದರೆ ಸಿದ್ಧಾರ್ಥ್ ಕ್ಷಮೆ ಕೇಳಿದಕ್ಕೆ ನನಗೆ ಸಂತೋಷವಾಗಿದೆ. ನನ್ನ ಸ್ಥಾನದಲ್ಲಿ ನಾನು ಚೆನ್ನಾಗಿಯೇ ಇದ್ದೇನೆ. ದೇವರು ಸಿದ್ಧಾರ್ಥ್ ಗೆ ಒಳ್ಳೆಯದು ಮಾಡಲಿ ಅಂತಲೇ ಹೇಳಿದ್ದಾರೆ ಸೈನಾ ನೆಹ್ವಾಲ್.
PublicNext
12/01/2022 12:48 pm