ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2022 ಪ್ರಾಯೋಜಕರು TATA ಗ್ರೂಪ್ಸ್

ನವದೆಹಲಿ: 2022 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಖ್ಯ (ಟೈಟಲ್) ಪ್ರಾಯೋಜಕತ್ವವನ್ನು ಭಾರತ ಮೂಲದ ‘ಟಾಟಾ ಗ್ರೂಪ್’ ತೆಗೆದುಕೊಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚೇರ್ಮನ್ ಬ್ರಿಜೇಶ್ ಪಟೇಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿಂದೆ ಟೂರ್ನಿ ಪ್ರಾಯೋಜಕತ್ವ ಚೀನಾ ಮೂಲದ ಮೊಬೈಲ್ ಸಂಸ್ಥೆ ವಿವೋ ಹೆಸರಿನಲ್ಲಿತ್ತು. ಆದರೆ ಈ ಬಾರಿ ಟಾಟಾ ಗ್ರೂಪ್ ಶೀರ್ಷಿಕೆ ಪ್ರಾಯೋಜಕತ್ವ ಬಿಡ್ ಗೆದ್ದಿದೆ.

ಇನ್ನು ವಿವೋ ಐಪಿಎಲ್ ಲೀಗ್ ನೊಂದಿಗಿನ ತನ್ನ ಪ್ರಾಯೋಜಕತ್ವದ ಒಪ್ಪಂದದಲ್ಲಿ ಎರಡು ವರ್ಷಗಳ ಅವಧಿ ಉಳಿದಿದ್ದು, ಇದರ ಪರಿಣಾಮವಾಗಿ, ಈ ಅವಧಿಯಲ್ಲಿ, ಟಾಟಾ ಮುಖ್ಯ ಪ್ರಾಯೋಜಕರಾಗಿ ಉಳಿಯುತ್ತದೆ ಎಂದು ಬ್ರಿಜೇಶ್ ಪಟೇಲ್ ಹೇಳಿದ್ದಾರೆ.

Edited By : Nirmala Aralikatti
PublicNext

PublicNext

11/01/2022 03:37 pm

Cinque Terre

31.49 K

Cinque Terre

6

ಸಂಬಂಧಿತ ಸುದ್ದಿ