ನವದೆಹಲಿ: ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಏಕದಿನ, ಟಿ20 ಬೆನ್ನಲ್ಲೇ ಟೆಸ್ಟ್ ತಂಡದ ನಾಯಕತ್ವಕ್ಕೂ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿಲು ವಿರಾಟ್ ಕೊಹ್ಲಿ ಇಂದು ಮಧ್ಯಾಹ್ನ 3.30ಕ್ಕೆ ಮಹತ್ವದ ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಈಗಾಗಲೇ ನಡೆದ ಎರಡು ಪಂದ್ಯಗಳ ಪೈಕಿ ಒಂದರಲ್ಲಿ (ಸೆಂಚುರಿಯನ್ ಪಂದ್ಯದಲ್ಲಿ) ವಿರಾಟ್ ಕೊಹ್ಲಿ ಲಭ್ಯವಾಗಿದ್ದರು. ಆದರೆ ಬೆನ್ನು ನೋವು ಕಾರಣದಿಂದಾಗಿ ಜೋಹಾನ್ಸ್ ಬರ್ಗ್ ಟೆಸ್ಟ್ ಪಂದ್ಯದಿಂದ ಅವರು ವಿಶ್ರಾಂತಿ ಪಡೆದಿದ್ದರು. ಅಷ್ಟೇ ಅಲ್ಲದೇ ಈ ವೇಳೆ ನಡೆದ ಪಂದ್ಯಪೂರ್ವ ಸಮಾವೇಶಗಳಿಂದ ದೂರ ಉಳಿದಿದ್ದರು.
PublicNext
10/01/2022 02:46 pm