ಸಿಡ್ನಿ: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆ್ಯಷಸ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.
ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ಗೆ ದೊರೆತ ಜೀವದಾನ ಕ್ರಿಕೆಟ್ ಪ್ರೇಮಿಗಳನ್ನು ಅಚ್ಚರಿಗೆ ದೂಡಿದೆ. ಆನ್‌ಫೀಲ್ಡ್ ಅಂಪಾಯರ್ ಔಟ್ ನೀಡಿದ ಕಾರಣ ಮೂರನೇ ಅಂಪಾಯರ್ ಮೊರೆ ಹೋದ ಬೆನ್ ಸ್ಟೋಕ್ಸ್ ತೀರ್ಪನ್ನು ಬದಲಾಯಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಮೂಲಕ ಬೆನ್ ಸ್ಟೋಕ್ಸ್ ಹಾಗೂ ಇಂಗ್ಲೆಂಡ್ ತಂಡ ಜೀವದಾನವನ್ನು ಪಡೆಯಿತು. ಆದರೆ ಮೂರನೇ ಅಂಪಾಯರ್ ದೊಡ್ಡ ಪರದೆಯಲ್ಲಿ ರಿಪ್ಲೇ ದೃಶ್ಯಗಳು ಬಿತ್ತರವಾದಾಗ ಸ್ವತಃ ಬೆನ್ ಸ್ಟೋಕ್ಸ್ ಅಚ್ಚರಿಗೆ ಒಳಗಾಗಿದ್ದರು.
ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಈ ಕುರಿತು ಟ್ವೀಟ್ ಮಾಡಿದ್ದು, ಕ್ರಿಕೆಟ್‌ನಲ್ಲಿ 'ಹಿಟ್ಟಿಂಗ್ ದಿ ಸ್ಟಂಪ್ಸ್' ಎಂಬ ಹೊಸ ನಿಯಮವನ್ನು ಅವಿಷ್ಕಾರ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ. ಬೌಲರ್‌ಗಳಿಗೂ 'ಸಮಾನ ನೀತಿ' ಕುರಿತು ಪ್ರತಿಪಾದಿಸಿರುವ ಸಚಿನ್, ಕ್ರಿಕೆಟ್ ಪ್ರಿಯರ ಅಭಿಪ್ರಾಯಗಳನ್ನು ಕೇಳಿದ್ದಾರೆ.
PublicNext
07/01/2022 05:30 pm