ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs SA 2nd Test: ಹರಿಣರಿಗೆ ಭರ್ಜರಿ ಗೆಲುವು- ಸರಣಿ ಸಮಬಲ

ಜೋಹಾನ್ಸ್‌ಬರ್ಗ್: ನಾಯಕ ಡೀನ್ ಎಲ್ಗರ್ ಅದ್ಭುತ ಬ್ಯಾಟಿಂಗ್ ಸಹಾಯದಿಂದ ದಕ್ಷಿಣ ಆಫ್ರಿಕಾ ತಂಡವು ಟೀಂ ಇಂಡಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 1-1 ಅಂಕಗಳಿಂದ ಸರಣಿ ಸಮಬಲಗೊಂಡಿದ್ದು, ಜನವರಿ 11ರಂದು ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯವು ಉಭಯ ತಂಡಗಳಿಗೆ ಮಹತ್ವದಾಗಿದೆ.

ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಇಂದು ಮಳೆಯಿಂದಾಗಿ ಮೊದಲ ಎರಡು ಸೆಷನ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ. ಬಹಳ ಹೊತ್ತಿನ ನಂತರ ಮಳೆ ನಿಂತಿದ್ದರಿಂದ ಆಟಗಾರರು ಮೈದಾನಕ್ಕೆ ಮರಳಿದರು.

ದಕ್ಷಿಣ ಆಫ್ರಿಕಾ ಗೆಲುವಿಗೆ 240 ರನ್‌ಗಳ ಅಗತ್ಯವಿತ್ತು, ಪಂದ್ಯದ ನಾಲ್ಕನೇ ದಿನದಂದು ಮೂರು ವಿಕೆಟ್‌ಗಳ ನಷ್ಟಕ್ಕೆ ಈ ಸಾಧನೆ ಮಾಡಿದೆ. ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ತಂಡವನ್ನು ಮುಂಚೂಣಿಯಿಂದ ಮುನ್ನಡೆಸಿದರು ಮತ್ತು ಅಜೇಯ 96 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು. ಇನ್ನು ರಾಸಿ ವ್ಯಾನ್ ಡೆರ್ ಡಸ್ಸೆನ್ 40 ರನ್ ಹಾಗೂ ಟೆಂಬಾ ಬವುಮಾ ಅಜೇಯ 23 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್ ವಿವರ:

ಭಾರತದ ಮೊದಲ ಇನ್ನಿಂಗ್ಸ್‌: 63.1 ಓವರ್‌, 202 ರನ್/ 10 ವಿಕೆಟ್

ದಕ್ಷಿಣ ಆಫ್ರಿಕಾದ ಮೊದಲ ಇನ್ನಿಂಗ್ಸ್‌: 79.4 ಓವರ್‌, 229 ರನ್/ 10 ವಿಕೆಟ್

ಭಾರತದ ಎರಡನೇ ಇನ್ನಿಂಗ್ಸ್‌: 60.1 ಓವರ್‌, 266 ರನ್‌/ 10 ವಿಕೆಟ್

ದಕ್ಷಿಣ ಆಫ್ರಿಕಾದ ಎರಡನೇ ಇನ್ನಿಂಗ್ಸ್‌: 67.4 ಓವರ್‌, 243 ರನ್/ 3 ವಿಕೆಟ್

Edited By : Vijay Kumar
PublicNext

PublicNext

06/01/2022 09:42 pm

Cinque Terre

22.85 K

Cinque Terre

2

ಸಂಬಂಧಿತ ಸುದ್ದಿ