ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 266 ರನ್‌ಗಳಿಗೆ ಆಲೌಟ್ ಆಗಿದ್ದು, ಹರಿಣರಿಗೆ 240 ರನ್‌ಗಳ ಗುರಿ ನೀಡಿದೆ.
ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ, ಎದುರಾಳಿ ದಕ್ಷಿಣ ಆಫ್ರಿಕಾ ತಂಡದ ಎದುರು ಸೋಲಿನ ಸುಳಿಗೆ ಸಿಲುಕಿದೆ. ಭಾರತ ನೀಡಿದ 240 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ, ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದೆ. ಇನ್ನು ಈ ಪಂದ್ಯವನ್ನು ಗೆದ್ದುಕೊಳ್ಳಲು ದಕ್ಷಿಣ ಆಫ್ರಿಕಾ 122 ರನ್ಗಳು ಮಾತ್ರ ಅಗತ್ಯವಿದೆ.
27 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 266 ರನ್‌ಗಳಿಗೆ ಆಲೌಟ್ ಆಯ್ತು. ಈ ಮೂಲಕ ಎದುರಾಳಿಗೆ 240 ರನ್‌ಗಳ ಗುರಿ ನೀಡಿತ್ತು. ಭಾರತದ ಪರ ಕೆಎಲ್ ರಾಹುಲ್ 8 ರನ್, ಮಾಯಾಂಕ್ ಅಗರವಾಲ್ 23 ರನ್, ಚೇತೇಶ್ವರ ಪೂಜಾರ 53 ರನ್, ಅಜಿಂಕ್ಯ ರಹಾನೆ 58 ರನ್, ಹನುಮ ವಿಹಾರಿ 40 ರನ್, ರಿಷಬ್ ಪಂತ್ 0 ರನ್, ರವಿಚಂದ್ರನ್ ಅಶ್ವಿನ್ 16 ರನ್ ಹಾಗೂ ಶಾರ್ದೂಲ್ ಠಾಕೂರ್ 28 ರನ್ ಬಾರಿಸಿದರು.
ಆದರೆ 240 ರನ್‌ಗಳ ಸವಾಲು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ಬ್ಯಾಟರ್ಗಳು, ಆರಂಭದಲ್ಲೇ ಭಾರತದ ಬೌಲರ್ಗಳಿಗೆ ಲೀಲಾಜಾಲವಾಗಿ ಬೆಂಡೆತ್ತಿದ್ದಾರೆ. ಮೂರನೇ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 118 ರನ್ ಬಾರಿಸಿದೆ. ಇನ್ನು ಗೆಲ್ಲಲು 122 ರನ್ ಗಳ ಅವಶ್ಯಕತೆ ಇದೆ. ದಕ್ಷಿಣ ಆಫ್ರಿಕಾದ ದುಸೆನ್ ಅಜೇಯ 11 ರನ್ ಹಾಗೂ ಎಲ್ಗರ್ ಅಜೇಯ 46 ರನ್ ಬಾರಿಸಿದ್ದು ನಾಲ್ಕನೇ ದಿನದಾಟವನ್ನು ಆರಂಭಿಸಲಿದ್ದಾರೆ.
PublicNext
05/01/2022 10:59 pm