ಶ್ರೀಲಂಕಾದ ಬ್ಯಾಟರ್ ಭಾನುಕಾ ರಾಜಪಕ್ಸೆ ತಕ್ಷಣದಿಂದ ಜಾರಿಗೆ ಬರುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಈ ಸಂಬಂಧ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಪತ್ರ ಬರೆದಿರುವ 30 ವರ್ಷದ ರಾಜಪಕ್ಸೆ, ಕೌಟುಂಬಿಕ ಕಾರಣವನ್ನು ಉಲ್ಲೇಖಿಸಿದ್ದಾರೆ. 'ನಾನು ಆಟದಲ್ಲಿ ಆಟಗಾರನಾಗಿ ಮತ್ತು ಕುಟುಂಬದಲ್ಲಿ ಪತಿಯಾಗಿ ನನ್ನ ಸ್ಥಾನವನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಿದ್ದೇನೆ. ಪಿತೃತ್ವ ಮತ್ತು ಸಂಬಂಧಿತ ಕೌಟುಂಬಿಕ ಕಟ್ಟು ಪಾಡುಗಳಿಗಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ' ಎಂದು ಪತ್ರದಲ್ಲಿ ಬರೆದಿದ್ದಾರೆ.
PublicNext
05/01/2022 09:47 pm