ಜೋಹಾನ್ಸ್ಬರ್ಗ್: ಭಾರತ-ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ ವೇಳೆ ಬ್ಯಾಟಿಂಗ್ ನಡೆಸಿದ್ದ ಜಸ್‌ಪ್ರೀತ್ ಬುಮ್ರಾ ಎದುರಾಳಿ ತಂಡದ ಬೌಲರ್ ಜಾನ್ಸೆನ್ ಜೊತೆ ಮಾತಿನ ಸಮರ ನಡೆಸಿದರು. ಈ ಪ್ರಸಂಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸೆನ್ ಎಸೆದ 54ನೇ ಓವರ್ನಲ್ಲಿ ಈ ಘಟನೆ ನಡೆದಿದೆ. ಬುಮ್ರಾ ಬ್ಯಾಟಿಂಗ್ ಮಾಡುತ್ತಿದ್ದಾಗ ಜಾನ್ಸೆನ್ ಎಸೆದ ಬೌನ್ಸರ್ ಜಸ್‌ಪ್ರೀತ್ ಎದೆಯ ಭಾಗಕ್ಕೆ ಬಿದ್ದಿದ್ದು ಅವರು ಕೋಪಗೊಂಡರು. ಈ ವೇಳೆ ಇಬ್ಬರು ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಅಂಪೈರ್ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
PublicNext
05/01/2022 08:08 pm