ನವದೆಹಲಿ:ಇಂಡಿಯನ್ ಕ್ರಿಕೆಟ್ ಟೀಮ್ ನ ಮಾಜಿ ಆಟಗಾರ ಹರ್ಭಜನ್ ಸಿಂಗ್ ಈಗ ಒಂದು ಸತ್ಯ ಬಿಚ್ಚಿಟ್ಟಿದ್ದಾರೆ. ಎಲ್ಲ ರೀತಿಯ ಕ್ರಿಕೆಟ್ ಗೆ ಗುಡ್ ಬಾಯ್ ಹೇಳಿರೋ ಹರ್ಭಜನ್,ಭಾರತೀಯ ಕ್ರಿಕೆಟ್ ತಂಡ ಅತ್ಯುತ್ತಮ ನಾಯಕ ಯಾರೂ ಅನ್ನೋ ಆ ಒಂದು ಸತ್ಯವನ್ನ ಈಗ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ.
ಹರ್ಭಜನ್ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಉತ್ತಮ ನಾಯಕ ಧೋನಿನಾ-ಸೌರವ ಗಂಗೂಲಿನಾ ಅನ್ನೋ ವಿಷಯದ ಮೇಲೆ ಮಾತನಾಡಿದ್ದಾರೆ.
ಸೌರವ್ ಗಂಗೂಲಿ ನಾಯಕತ್ವದಲ್ಲಿಯೇ ನಾನು ಆಡಿರೋದು. ಅವರೇ ನನಗೆ ಫ್ರೀಡಂ ಕೊಟ್ಟಿದ್ದಾರೆ. ಹಾಗಾಗಿಯೇ ನಾನು ದೊಡ್ಡ ಬೌಲರ್ ಆಗಲು ಸಾಧ್ಯವಾಯಿತು ಅಂತಲೇ ಹೇಳಿದ್ದಾರೆ ಹರ್ಭಜನ್.
ಧೋನಿ ಕೂಡ ಒಳ್ಳೆ ನಾಯಕರೇ ಆಗಿದ್ದಾರೆ. ಆದರೆ ನನಗೆ ಸೌರವ್ ಗಂಗೂಲಿನೇ ಅತ್ಯುತ್ತಮ ನಾಯಕ ಅಂತಲೇ ಅನಿಸುತ್ತದೆ ಎಂದೇ ಹರ್ಭಜನ್ ಹೇಳಿಕೊಂಡಿದ್ದಾರೆ.
PublicNext
02/01/2022 04:21 pm