ದಕ್ಷಿಣ ಆಫ್ರಿಕಾ: ಭಾರತ ಹಾಗೂ ದಕ್ಷಿಣ ಆಫ್ರಿಕಾ ಟಿಸ್ಟ್ ಕ್ರಿಕೆಟ್ ಮ್ಯಾಚ್ ಹಿನ್ನೆಲೆಯಲ್ಲಿ ಗಂಡನೊಂದಿಗೆ ದಕ್ಷಿಣ ಆಫ್ರಿಕಾಗೆ ಹೋದ ನಟಿ ಅನುಷ್ಕಾ ಶರ್ಮಾ ಮಗಳು ವಮಿಕಾ ಅಮ್ಮಾ ಎಂದ ಆಡಿಯೋ ಕ್ಲಿಪ್ ನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅನುಷ್ಕಾ ತಾವು ದಕ್ಷಿಣ ಆಫ್ರಿಕಾದಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಲೆ ಇದ್ದಾರೆ. ಕಳೆದ ವರ್ಷ ಜನವೆರಿಯಲ್ಲಿ ದಂಪತಿಗಳು ಒಂದು ಹೆಣ್ಣು ಮಗುವನ್ನು ಸ್ವಾಗತಿಸಿದರು. ಇನ್ನು, ಸ್ಟಾರ್ ಕಿಡ್ ಇದೇ ತಿಂಗಳು ತನ್ನ ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾಳೆ.
ದಂಪತಿಗಳು ತಮ್ಮ ಮಗುವಿನ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಬಯಸುತ್ತಿರುವ ಕಾರಣ ಅಭಿಮಾನಿಗಳು ಇನ್ನೂ ವಾಮಿಕಾ ಮುಖವನ್ನು ನೋಡಿಲ್ಲ, ಆದರೆ ಅನುಷ್ಕಾ ಇತ್ತೀಚೆಗೆ ಮಗಳ ಧ್ವನಿಯನ್ನು ಒಂದು ವಿಡಿಯೋ ಮೂಲಕ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ.
ವಿರುಷ್ಕಾ ದಂಪತಿ ದಕ್ಷಿಣ ಆಫ್ರಿಕಾದಲ್ಲಿ ಒಂದು ಪಾರ್ಟಿಯೊಂದಿಗೆ ಹೊಸ ವರ್ಷ 2022ರನ್ನು ಸ್ವಾಗತಿಸಿದರು. ಇದರ ಕುರಿತು ನಟಿ ಮತ್ತು ವಿರಾಟ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
PublicNext
02/01/2022 01:49 pm