ಮುಂಬೈ: ಮುಂದಿನ ಏಕದಿನದ ಮೂರು ಪಂದ್ಯಗಳದ ಸರಣಿಗಾಗಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಹೋರಾಡಲು ಟೀಂ ಇಂಡಿಯಾ ಆಟಗಾರರ ಅಂತಿಮ ಪಟ್ಟಿ ಪ್ರಕಟವಾಗಿದೆ. ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕತ್ವದಿಂದ ಬಿಸಿಸಿಐ ಕೆಳಗಿಳಿಸಿತ್ತು. ಆ ನಂತರ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ಜವಾಬ್ದಾರಿ ನೀಡಿತ್ತು. ಈ ನಡುವೆ ರೋಹಿತ್ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಕೆ.ಎಲ್ ರಾಹುಲ್ಗೆ ತಂಡವನ್ನು ಮುನ್ನಡೆಸುವ ಅದೃಷ್ಟ ಲಭಿಸಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಬಳಿಕ ಏಕದಿನ ಸರಣಿ ಆರಂಭವಾಗಲಿದೆ. ಜನವರಿ 19, 21 ಹಾಗೂ 23ರಂದು ಏಕದಿನ ಪಂದ್ಯಗಳು ನಡೆಯಲಿವೆ.
ಟೀಮ್ ಇಂಡಿಯಾ ಆಟಗಾರರ ಅಂತಿಮ ಪಟ್ಟಿ ಹೀಗಿದೆ..
1. ಕೆ.ಎಲ್. ರಾಹುಲ್ (ನಾಯಕ)
2. ವಿರಾಟ್ ಕೊಹ್ಲಿ
3. ಶಿಖರ್ ಧವನ್
4. ಋತುರಾಜ್ ಗಾಯಕವಾಡ್
5. ಸೂರ್ಯಕುಮಾರ್ ಯಾದವ್,
6. ಶ್ರೇಯಸ್ ಅಯ್ಯರ್
7. ವೆಂಕಟೇಶ್ ಅಯ್ಯರ್
8. ರಿಷಭ್ ಪಂತ್ (ವಿಕೆಟ್ ಕೀಪರ್)
9. ಇಶಾನ್ ಕಿಶನ್ (ವಿಕೆಟ್ ಕೀಪರ್)
10. ಯಜುವೇಂದ್ರ ಚಾಹಲ್
11. ವಾಷಿಂಗ್ಟನ್ ಸುಂದರ್
12. ಜಸ್ಪ್ರೀತ್ ಬೂಮ್ರಾ (ಉಪನಾಯಕ)
13. ಭುವನೇಶ್ವರ್ ಕುಮಾರ್
14. ದೀಪಕ್ ಚಾಹರ್
15. ಪ್ರಸಿದ್ದ ಕೃಷ್ಣ
16. ಶಾರ್ದೂಲ್ ಠಾಕೂರ್
17. ಮೊಹಮ್ಮದ್ ಸಿರಾಜ್
18. ಆರ್. ಅಶ್ವಿನ್
PublicNext
01/01/2022 09:05 pm