ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಅಥ್ಲೀಟ್ ಎಂ ಆರ್ ಪೂವಮ್ಮ

ಮಂಗಳೂರು: ಭಾರತದ ತಾರಾ ಅಥ್ಲೀಟ್, ಏಷ್ಯನ್ ಗೇಮ್ಸ್, ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಪದಕ ವಿಜೇತೆ ರಾಜ್ಯದ ಎಂ ಆರ್ ಪೂವಮ್ಮ ಡಿ.29 ರಂದು ಮಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಪೂವಮ್ಮ ತಮ್ಮ ಗೆಳೆಯ ಹಾಗೂ ಅಥ್ಲೀಟ್ ಅಗಿರುವ ಜಿತಿನ್ ಪೌಲ್ ಅವರನ್ನು ವರಿಸಿದ್ದಾರೆ. ಮಂಗಳೂರಿನ ಹೊರ ವಲಯದ ಅಡ್ಯಾರ್ ಗಾರ್ಡನ್ ನಲ್ಲಿ ಕೊಡವ ಸಂಪ್ರದಾಯದಂತೆ ಮದುವೆ ಸಮಾರಂಭ ನೆರವೇರಿತು.

ಪೂವಮ್ಮ ಅವರ ತಂದೆ ಮಚ್ಚೆಟ್ಟಿರ ಜಿ. ತಮ್ಮಯ್ಯ (ರಾಜು), ತಾಯಿ ಜಾನಕಿ (ಜಾಜಿ) ಸೇರಿದಂತೆ ಕುಟುಂಬ ವರ್ಗ, ಸ್ನೇಹಿತರು ಉಪಸ್ಥಿತರಿದ್ದು ಆಶೀರ್ವದಿಸಿದರು. ಜನವರಿ ಒಂದರಂದು ತ್ರಿಶ್ಶೂರ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

Edited By : Nirmala Aralikatti
PublicNext

PublicNext

30/12/2021 01:12 pm

Cinque Terre

53.21 K

Cinque Terre

0

ಸಂಬಂಧಿತ ಸುದ್ದಿ