ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿ.22 ರಿಂದ ಸಿಲಿಕಾನ್ ಸಿಟಿಯಲ್ಲಿ ಪ್ರೋ ಕಬಡ್ಡಿ-ಕನ್ನಡಿಗರದ್ದೇ ಫುಲ್ ಹವಾ

ಬೆಂಗಳೂರು: ಹೆಚ್ಚು ಕಡಿಮೆ ಎರಡು ವರ್ಷದ ಬಳಿಕ ಪ್ರೋ ಕಬಡ್ಡಿ ಲೀಗ್ ಮತ್ತೆ ಶುರು ಆಗುತ್ತಿದೆ.ಬೆಂಗಳೂರಿನಲ್ಲಿಯೇ ಕಬಡ್ಡಿ ಲೀಗ್ ಆರಂಭವಾಗುತ್ತಿರೋದು ವಿಶೇಷ.

ಡಿಸೆಂಬರ್-22 ರಂದು ಪ್ರೋ ಕಬಡ್ಡಿ ಲೀಗ್ ಬೆಂಗಳೂರಿನ ಒಂದೇ ಹೋಟೆಲ್‌ ನಲ್ಲಿಯೇ ಆಯೋಜನೆ ಆಗಿದೆ.

ಪ್ರೋ ಕಬಡ್ಡಿ ಪಂದ್ಯದಲ್ಲಿ ಕನ್ನಡಿಗರು ಸದಾ ಮಿಂಚಿದ್ದಾರೆ. ಹರಿಯಾಣಾ,ಮಹಾರಾಷ್ಟ್ರದ ಬಿಟ್ಟರೆ ಕರ್ನಾಟಕದ ಕಬಡ್ಡಿ ಆಟಗಾರರೇ ಹೆಚ್ಚು ಕಂಗೊಳಿಸಿರೋದು.

ಈ ಸಲವೂ ಕೂಡ 12 ಕ್ಕೂ ಹೆಚ್ಚು ಆಟಗಾರರು ಈ ಪ್ರೋ ಕಬಡ್ಡಿ ಪಂದ್ಯದಲ್ಲಿ ಆಡುತ್ತಿದ್ದಾರೆ.12 ತಂಡಗಳಲ್ಲಿ 8 ತಂಡದಲ್ಲಿ ಕರ್ನಾಟಕ ಮೂಲದವರೇ ಇದ್ದಾರೆ. ಆದರೆ ಬೆಂಗಳೂರು ಬುಲ್ಸ್‌ನಲ್ಲಿಯೇ ಕರ್ನಾಟಕ ಆಟಗಾರರು ಇಲ್ಲದೆ ಇರೋದೇ ಬೇಸರದ ಸಂಗತಿ.

Edited By :
PublicNext

PublicNext

21/12/2021 10:17 am

Cinque Terre

31.76 K

Cinque Terre

1

ಸಂಬಂಧಿತ ಸುದ್ದಿ