ಮುಂಬೈ: ಇಂಡಿಯನ್ ಕ್ರಿಕೆಟ್ ಟೀಂ ನ ಮಾಜಿ ನಾಯಕ ವಿರಾಟ್ ಕೊಹ್ಲಿಯ ಸದ್ಯ ಯಾವುದೇ ಹೊರೆಯಲ್ಲಿ ಇಲ್ಲವೇ ಇಲ್ಲ. ಕೇವಲ ಟೆಸ್ಟ್ ಪಂದ್ಯದ ನಾಯಕತ್ವದ ಹೊರೆ ಇದೆ. ಹಾಗಾಗಿಯೇ ಎರಡು ವರ್ಷದ ಹಿಂದೆ ನಾವು ನೋಡಿದ್ದ ಅದೇ ಕೊಹ್ಲಿಯನ್ನ ನಾವು ಈಗ ಮತ್ತೆ ಕಾಣಬಹುದು ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಸದ್ಯ ಆಫ್ರಿಕಾದಲ್ಲಿಯೇ ಇದ್ದಾರೆ. ಪಂದ್ಯಕ್ಕಾಗಿ ಕೆಲವೇ ದಿನಗಳಲ್ಲಿ ಅಭ್ಯಾಸದಲ್ಲೂ ಭಾಗಿ ಆಗಲಿದ್ದಾರೆ. ನಾಯಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ ಬೇಸರದಲ್ಲಿಯೇ ಇದ್ದರು. ಆದರೆ ಈಗ ಟೆಸ್ಟ್ ಪಂದ್ಯದ ನಾಯಕತ್ವದ ಹೊರೆ ಇರೋ ವಿರಾಟ್ ಕೊಹ್ಲಿ ಇಲ್ಲಿ ತಮ್ಮ ಎಂದಿನ ಶತಕದ ಅಬ್ಬರ ಮುಂದುರೆಸಲಿದ್ದಾರೆ ಎಂದು ಅತೀ ವಿಶ್ವಾಸದಲ್ಲಿಯೇ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ವೈಟ್ ಬಾಲ್ ಕ್ರಿಕೆಟ್ ನಾಯಕತ್ವದಿಂದ ಕೆಳಗೆ ಇಳಿಸಿದ್ದು ಒಳ್ಳೆಯದೇ ಆಯಿತು. ಇದರಿಂದ ಕೊಹ್ಲಿ ರಿಯಲ್ ಆಟವನ್ನ ನಾವು ಈಗ ನೋಡಲು ಸಾಧ್ಯವಾಗುತ್ತದೆ ಆಗುತ್ತದೆ. ಹಾಗೇನೆ ಹೆಚ್ಚಿನ ಹೊರೆ ಇಲ್ಲದೇ ಇರೋದ್ರಿಂದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕಡೆಗೆ ಹೆಚ್ಚು ಗಮನ ಕೊಡಲು ಸಾಧ್ಯವಗುತ್ತದೆ ಅಂತಲೂ ಸುನಿಲ್ ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
PublicNext
18/12/2021 08:53 am