ತಮಿಳುನಾಡು : ಕೊರೋನಾ, ಒಮಿಕ್ರಾನ್ ಸೋಂಕಿನ ಆತಂಕದ ನಡುವೆಯೂ ತಮಿಳುನಾಡಿನಲ್ಲಿ ಸಾಂಪ್ರದಾಯಿಕ ಸಾಹಸ ಕ್ರೀಡೆಯ ತರಬೇತಿ ಜೋರಾಗೇ ನಡೀತಿದೆ. ಈಗಾಗಲೇ ಇಲ್ಲಿನ ಮದುರೈನಲ್ಲಿ ಜಲ್ಲಿಕಟ್ಟು ಕ್ರೀಡೆಗಾಗಿ ಹೋರಿಗಳಿಗೆ ತರಬೇತಿ ನೀಡಲಾಗ್ತಿದೆ. ಪ್ರತಿ ವರ್ಷ ಸಂಕ್ರಾಂತಿ ಸಂದರ್ಭದಲ್ಲಿ ಜಲ್ಲಿಕಟ್ಟು ಆಯೋಜನೆ ಮಾಡಲಾಗುತ್ತದೆ.
ಅದಕ್ಕಾಗಿ ಸುಮಾರು ಒಂದು ತಿಂಗಳ ಮೊದಲೇ ಕ್ರೀಡೆಯಲ್ಲಿ ಭಾಗವಹಿಸುವ ಹೋರಿಗಳಿಗೆ ತರಬೇತಿ ನೀಡಲಾಗುತ್ತೆ. ಕಳೆದ ಸಂಕ್ರಾಂತಿಯಲ್ಲಿ ಕೊರೊನಾ ವೈರಸ್ ನಿಯಂತ್ರಣದಲ್ಲಿದ್ದರೂ, ಎರಡನೆ ಹಂತದ ಅಲೆಯ ಆತಂಕ ಇದ್ದುದರಿಂದ ಜಲ್ಲಿಕಟ್ಟನ್ನು ನಡೆಸಬಾರದು ಎಂಬ ಅಭಿಪ್ರಾಯಗಳಿದ್ದವು. ವಾದ ವಿವಾದಗಳ ನಡುವೆ ತಮಿಳುನಾಡು ಸರ್ಕಾರ ಜಲ್ಲಿಕಟ್ಟು ಕ್ರೀಡೆಗೆ ಷರತ್ತು ಬದ್ಧ ಅನುಮತಿ ನೀಡಿತ್ತು.
ಇನ್ನು ಈ ವರ್ಷ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ಆದ್ರೆ ಜನ ಮಾತ್ರ ಸಾಂಪ್ರದಾಯಿಕ ಸಾಹಸ ಕ್ರೀಡೆಯಾದ ಜಲ್ಲಿಕಟ್ಟು ನಿಲ್ಲಿಸಲಾಗದು ಎಂದು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ತಿದ್ದಾರೆ. ಹೋರಿಗಳನ್ನು ಪಳಗಿಸುವ ಕೆಲಸದಲ್ಲಿ ನಿರತಾಗಿದ್ದಾರೆ.
PublicNext
17/12/2021 05:15 pm