ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೌರವ್ ಗಂಗೂಲಿ ಹೇಳಿದ್ದೆಲ್ಲವೂ ಸುಳ್ಳಾ?- ಬಿಸಿಸಿಐ ಬಣ್ಣ ಬಯಲು ಮಾಡಿದ ಕೊಹ್ಲಿ

ಮುಂಬೈ: ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಎದ್ದಿದ್ದ ವದಂತಿಗಳಿಗೆ ಭಾರತ ಕ್ರಿಕೆಟ್ ಟೆಸ್ಟ್​ ತಂಡದ ನಾಯಕ ವಿರಾಟ್ ಕೊಹ್ಲಿ ಅಂತ್ಯ ಹಾಡಿದ್ದಾರೆ.

ದಕ್ಷಿಣ ಆಫ್ರಿಕಾ ಸರಣಿಗೆ ತೆರಳುವ ಮುಂಬೈನಲ್ಲಿ ನಡೆದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, "ಟಿ20 ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಬಿಸಿಸಿಐಗೆ ತಿಳಿಸಿದಾಗ ಅವರು ಅದನ್ನು ಸ್ವಾಗತಿಸಿದ್ದರು. ಯಾರೂ ಕೂಡ ನಾಯಕತ್ವದಿಂದ ಕೆಳಗಿಳಿಯದಂತೆ ಮನವಿ ಮಾಡಿಲ್ಲ" ಎಂದು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿದ್ದೇನೆ. ಮಾಧ್ಯಮಗಳು ನೀವು ಆಡಲ್ವಾ ಎಂದು ನನ್ನನ್ನ ಕೇಳಬಾರದು. ನಾನು ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಏಕದಿನ ಸರಣಿಯನ್ನು ಆಡುತ್ತಿಲ್ಲ ಎಂದು ಯಾರು ಹೇಳಿದ್ದಾರೋ ಅವರನ್ನೇ ಪ್ರಶ್ನೆ ಮಾಡಿ. ನಾನು ತಂಡದಲ್ಲಿ ಲಭ್ಯನಿದ್ದೇನೆ. ನಾನು ಯಾವಾಗಲೂ ಆಯ್ಕೆಗೆ ಲಭ್ಯವಾಗಿದ್ದೇನೆ ಎಂದರು.

ಅಲ್ಲದೇ ನಾನು BCCI ಬಳಿ ಯಾವುದೇ ವಿರಾಮ ಕೇಳಿಲ್ಲ. ಏಕದಿನ ನಾಯಕತ್ವ ಸ್ಥಾನದಿಂದ ಕೆಳಗೆ ಇಳಿಸುವ ಬಗ್ಗೆ ನನೆಗೆ ಕೊನೆ ಕ್ಷಣದಲ್ಲಿ ಹೇಳಿದರು. ಐದು ಜನ ನೇತೃತ್ವದ ಆಯ್ಕೆ ಸಮಿತಿ ನನ್ನ ಬಳಿ ಹೇಳಿತು. ನಿಮ್ಮನ್ನ ಏಕದಿನ ನಾಯಕತ್ವ ಸ್ಥಾನದಿಂದ ಕೆಳಗೆ ಇಳಿಸಲಾಗಿದೆ. ರೋಹಿತ್ ಶರ್ಮಾ ಅವರನ್ನ ನಾಯಕರನ್ನಾಗಿ ಮಾಡಲಾಗಿದೆ ಎಂದು ಹೇಳಿದರು ಅಂತ ಸ್ಪಷ್ಟಪಡಿಸಿದರು.

ಈ ಹಿಂದೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕೊಹ್ಲಿ ಅವರಿಗೆ ಮಾಹಿತಿ ನೀಡಿಯೇ ಅವರನ್ನ ಒಡಿಐ ಕ್ಯಾಪ್ಟನ್ಸಿಯನ್ನ ರೋಹಿತ್ ಶರ್ಮಾಗೆ ನೀಡಲಾಗಿದೆ ಎಂದಿದ್ದರು. ಆದರೆ ಗಂಗೂಲಿ ಅವರ ಈ ಮಾತನನ್ನ ಕೊಹ್ಲಿ ನಿರಾಕರಿಸಿದ್ದಾರೆ. ಅಲ್ಲದೇ ನನ್ನನ್ನ ಕ್ಯಾಪ್ಟನ್ಸಿ ಸ್ಥಾನದಿಂದ ಇಳಿಸುವ ಬಗ್ಗೆ ಬಿಸಿಸಿಐ ಯಾವುದೇ ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Edited By : Vijay Kumar
PublicNext

PublicNext

15/12/2021 05:38 pm

Cinque Terre

67.69 K

Cinque Terre

7

ಸಂಬಂಧಿತ ಸುದ್ದಿ