ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೋಹಿತ್‌ಗೆ ಗಾಯ, ವಿರಾಟ್‌ಗೆ ವಿಶ್ರಾಂತಿ: ಕುತೂಹಲ ಮೂಡಿಸಿದೆ ಅಜರುದ್ದೀನ್ ಮಾತು

ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾಸದ ಸರಣಿಗೆ ಟೀಂ ಇಂಡಿಯಾದ ಸಿದ್ಧತೆಗಿಂತ ಹೆಚ್ಚಾಗಿ, ನಾಯಕತ್ವದ ವಿವಾದಗಳಿಂದಾಗಿ ಸುದ್ದಿಯಲ್ಲಿದೆ. ಏಕದಿನ ತಂಡದ ನಾಯಕ ಸ್ಥಾನದಿಂದ ತಮ್ಮನ್ನು ವಜಾ ಮಾಡಿದ ರೀತಿಗೆ ಬೇಸರವಾಗಿದ್ದಂತೆ ಕಾಣುತ್ತಿರುವ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಕೌಟುಂಬಿಕ ಕಾರಣ ನೀಡಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯುವ ತೀರ್ಮಾನ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್, "ವಿರಾಟ್ ಕೊಹ್ಲಿ ಏಕದಿನ ಸರಣಿಗೆ ಲಭ್ಯವಿರುವುದಿಲ್ಲ ಎಂದು ಮಾಹಿತಿಯನ್ನು ನೀಡಿದ್ದಾರೆ. ಇತ್ತ ರೋಹಿತ್ ಶರ್ಮಾ ಮುಂಬರುವ ಟೆಸ್ಟ್ ಸರಣಿಗೆ ಲಭ್ಯವಿರುವುದಿಲ್ಲ. ವಿಶ್ರಾಂತಿಯನ್ನು ಪಡೆಯುವುದರಲ್ಲಿ ಯಾವುದೇ ಸಮಸ್ಯೆಗಳು ಇಲ್ಲ. ಆದರೆ ಅದರ ಸಮಯ ಉತ್ತಮವಾಗಿರಬಹುದಾಗಿತ್ತು. ಇದು ಇಬ್ಬರು ಆಟಗಾರರ ನಡುವಿನ ಬಿರುಕನ್ನು ಸಮರ್ಥಿಸುತ್ತದೆ" ಎಂದು ತಿಳಿಸಿದ್ದಾರೆ.

ಮೊಹಮ್ಮದ್ ಅಜರುದ್ದೀನ್ ಅವರ ಮಾತು ಭಾರಿ ಕುತೂಹಲ ಮೂಡಿಸಿದೆ. ಈ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.

Edited By : Vijay Kumar
PublicNext

PublicNext

14/12/2021 05:48 pm

Cinque Terre

23.51 K

Cinque Terre

0