ಬ್ರಿಸ್ಬೇನ್: ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಅಲೆಕ್ಸ್ ಕೇರಿ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ವಿಶೇಷ ದಾಖಲೆ ಬರೆದಿದ್ದಾರೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ ಎಂಟು ಅಥವಾ ಅದಕ್ಕಿಂತ ಹೆಚ್ಚಿನ ಕ್ಯಾಚ್‌ಗಳನ್ನು ಪಡೆದ ವಿಶ್ವದ ಮೊದಲ ವಿಕೆಟ್ ಕೀಪರ್ ಎಂಬ ಸಾಧನೆಗೆ ಕೇರಿ ಭಾಜನರಾಗಿದ್ದಾರೆ.
ಬ್ರಿಸ್ಬೇನ್‌ನ 'ದಿ ಗಬ್ಬಾ' ಸ್ಟೇಡಿಯಂನಲ್ಲಿ ಶನಿವಾರ ನಡೆದ ಇಂಗ್ಲೆಂಡ್ ವಿರುದ್ಧ ಮುಕ್ತಾಯವಾದ ಮೊದಲನೇ ಆಶಷ್ ಟೆಸ್ಟ್ ಪಂದ್ಯದಲ್ಲಿ ಅಲೆಕ್ಸ್ ಕೇರಿ ಈ ಸಾಧನೆಯನ್ನು ಮಾಡಿದ್ದಾರೆ. ಟೆಸ್ಟ್ ಪದಾರ್ಪಣೆ ಪಂದ್ಯದಲ್ಲಿಯೇ ತಲಾ 7 ಕ್ಯಾಚ್‌ಗಳನ್ನು ಪಡೆದಿದ್ದ ಇಂಗ್ಲೆಂಡ್ ಮಾಜಿ ಕೀಪರ್ ಕ್ರಿಸ್ ರೀಡ್, ಆಸ್ಟ್ರೇಲಿಯಾ ಮಾಜಿ ಆಟಗಾರ ಬ್ರಿಯಾನ್ ರಬರ್, ಟೀಂ ಇಂಡಿಯಾ ರಿಷಭ್ ಪಂತ್ ಅವರ ದಾಖಲೆಯನ್ನು 30ರ ಪ್ರಾಯದ ಕೇರಿ ಮುರಿದಿದ್ದಾರೆ.
PublicNext
12/12/2021 08:01 am