ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ಯಾಪ್ಟನ್​ ಕೊಹ್ಲಿ ಯುಗಾಂತ್ಯ: ಟಿ20 ಜೊತೆಗೆ ಏಕದಿನ ತಂಡಕ್ಕೂ ರೋಹಿತ್ ನಾಯಕ

ನವದೆಹಲಿ: ಈಗಾಗಲೇ ಟಿ-20 ಕ್ರಿಕೆಟ್​ ತಂಡದ ನಾಯಕನಾಗಿರುವ ರೋಹಿತ್​ ಶರ್ಮಾ ಅವರಿಗೆ ಇದೀಗ ಮತ್ತೊಂದು ಮಹತ್ವದ ಜವಾಬ್ದಾರಿ ನೀಡಲಾಗಿದ್ದು, ಏಕದಿನ ತಂಡದ ನಾಯಕನನ್ನಾಗಿ ಬಿಸಿಸಿಐ ಆಯ್ಕೆ ಮಾಡಿದೆ. ಈ ಮೂಲಕ ಏಕದಿನ ಹಾಗೂ ಟಿ-20 ತಂಡಕ್ಕೆ ಹಿಟ್​ಮ್ಯಾನ್ ಅವರಿಗೆ ಕಪ್ತಾನ ಸ್ಥಾನ ನೀಡಲಾಗಿದೆ. ಉಳಿದಂತೆ ಟೆಸ್ಟ್​​ ತಂಡದಲ್ಲಿ ಉಪನಾಯಕನಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಈ ಮೂಲಕ ವಿರಾಟ್​ ಕೊಹ್ಲಿ ನಾಯಕತ್ವ ಇಲ್ಲಿಗೆ ಯುಗಾಂತ್ಯ ಕಂಡಿದೆ. ಈ ಹಿಂದೆ ಟಿ20 ನಾಯಕತ್ವ ತೊರೆದಿದ್ದ ವಿರಾಟ್​ ಕೊಹ್ಲಿ, ಏಕದಿನ ನಾಯಕತ್ವವನ್ನೂ ಕಳೆದುಕೊಂಡಿದ್ದಾರೆ. ಕೇವಲ ಟೆಸ್ಟ್​ ತಂಡದಲ್ಲಿ ಮಾತ್ರ, ನಾಯಕನಾಗಿ ಕೊಹ್ಲಿ ಮುಂದುವರಿಯಲಿದ್ದಾರೆ.

2021ರ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ವಿರಾಟ್ ಕೊಹ್ಲಿ ಟಿ20 ತಂಡದ ನಾಯಕ ಸ್ಥಾನದಿಂದ ಕೆಳಗಿಳಿದರೆ, ರೋಹಿತ್ ಶರ್ಮ ಈ ಜವಾಬ್ದಾರಿ ವಹಿಸಿಕೊಂಡಿದ್ದರು. ಇದೀಗ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಏಕದಿನ ತಂಡಕ್ಕೆ ರೋಹಿತ್​ ಶರ್ಮಾ ಅವರನ್ನು ನೇಮಿಸಲಾಗಿದೆ.

ಏಕದಿನ ಹಾಗೂ ಟಿ20 ಮಾದರಿಗೆ ಒಬ್ಬನೇ ನಾಯಕನನ್ನು ಆಯ್ಕೆ ಮಾಡಬೇಕು ಎಂದು ಆಯ್ಕೆ ಸಮಿತಿ ಮೊದಲೇ ಹೇಳಿತ್ತು. ಈ ಬಗ್ಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜೊತೆ ಚರ್ಚೆ ನಡೆಸಿದ್ದರು. ವಿರಾಟ್​ ಕೊಹ್ಲಿ ಬ್ಯಾಟಿಂಗ್​ ಕಡೆ ಹೆಚ್ಚು ಗಮನ ನೀಡಲಿ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ.

Edited By : Vijay Kumar
PublicNext

PublicNext

08/12/2021 08:58 pm

Cinque Terre

77.38 K

Cinque Terre

3

ಸಂಬಂಧಿತ ಸುದ್ದಿ