ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಸಾಗುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನ ನಿಶ್ಚಿತ ಹಾದಿಯತ್ತ ಸಾಗುತ್ತಿದೆ.
ನಿನ್ನೆ ಎರಡನೇ ದಿನದಾಟದಲ್ಲಿ ಬೌಲರ್ಗಳೇ ಮೇಲುಗೈ ಸಾಧಿಸಿದ್ದರು. ಎಜಾಜ್ ಪಟೇಲ್ ಭಾರತದ 10 ವಿಕೆಟ್ ಕಿತ್ತ ವಿಶ್ವ ದಾಖಲೆ ಬರೆದರೆ, ಇತ್ತ ಭಾರತೀಯ ಬೌಲರ್ಗಳ ಬೆಂಕಿಯ ಚೆಂಡಿಗೆ ತತ್ತರಿಸಿದ ನ್ಯೂಜಿಲೆಂಡ್ ಇದೇ ಮೊದಲ ಬಾರಿಗೆ ಅಲ್ಪ ಮೊತ್ತಕ್ಕೆ ಆಲೌಟ್ ಆದ ಕೆಟ್ಟ ದಾಖಲೆ ಬರೆಯಿತು. ಕಿವೀಸ್ ಪಡೆಯನ್ನು ಕೇವಲ 62 ರನ್ಗೆ ಆಲೌಟ್ ಮಾಡಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 69 ರನ್ ಬಾರಿಸಿತ್ತು. ಈ ಮೂಲಕ ಕೊಹ್ಲಿ ಪಡೆ ಬರೋಬ್ಬರಿ 332 ರನ್ಗಳ ಮುನ್ನಡೆ ಪಡೆದುಕೊಂಡಿತ್ತು. ಇಂದು ಮೂರನೇ ದಿನದಾಟದಲ್ಲಿ ಭಾರತವು 7 ವಿಕೆಟ್ ನಷ್ಟಕ್ಕೆ 276 ರನ್‌ಗಳಿಸಿ ಡಿಕ್ಲೇರ್ ಘೋಷಿಸಿದೆ.
ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಮಯಾಂಕ್ ಅಗರ್ವಾಲ್ 62 ರನ್, ಶುಭ್ಮನ್ ಗಿಲ್ 47 ರನ್, ಚೇತೇಶ್ವರ್ ಪೂಜಾರ 47 ರನ್, ಅಕ್ಷರ್ ಪಟೇಲ್ 41 ರನ್ ಹಾಗೂ ನಾಯಕ ವಿರಾಟ್ ಕೊಹ್ಲಿ 36 ರನ್ ಗಳಿಸಿದರು.
ಸ್ಕೋರ್ ವಿವರ:
ಭಾರತ ಪ್ರಥಮ ಇನಿಂಗ್ಸ್: 325/10
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್: 62/10
ಭಾರತ ಎರಡನೇ ಇನ್ನಿಂಗ್ಸ್: 276/7 ಡಿಕ್ಲೇರ್
PublicNext
05/12/2021 02:30 pm