ಲಂಡನ್: ವಿಶ್ವದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟ್ ಆಟಗಾರ್ತಿ ಐಲೀನ್ ಆಶ್ ಅವರು ತಮ್ಮ 110ನೇ ವಯಸ್ಸಿನಲ್ಲಿ ನಿಧನರಾದರು ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ.
ಐಲೀನ್ ಅವರು 1930 ಮತ್ತು 1940 ರ ದಶಕಗಳಲ್ಲಿ ಇಂಗ್ಲೆಂಡ್‌ಗಾಗಿ 7 ಟೆಸ್ಟ್ ಗಳನ್ನು ಆಡಿದ್ದು, ಬಲಗೈ ವೇಗದ ಬೌಲಿಂಗ್‌ನೊಂದಿಗೆ 23ರ ಸರಾಸರಿಯಲ್ಲಿ 10 ವಿಕೆಟ್ ಪಡೆದಿದ್ದರು. ಅವರು 1949ರಲ್ಲಿ ಆಶಸ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾಗವಹಿಸಿದ್ದರು. ಜೊತೆಗೆ ಮಹಿಳೆಯರ ಸಿವಿಲ್ ಸರ್ವಿಸ್, ಮಿಡ್ಲ್ಸೆಕ್ಸ್ ಮಹಿಳೆಯರು ಮತ್ತು ದಕ್ಷಿಣ ಮಹಿಳೆಯರ ದೇಶೀಯ ಕ್ರಿಕೆಟ್‌ನಲ್ಲಿ ತಂಡಗಳನ್ನು ಪ್ರತಿನಿಧಿಸಿದ್ದರು.
PublicNext
05/12/2021 08:06 am