ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ಲೀನ್ ಬೌಲ್ಡ್ ಆದರೂ ರಿವ್ಯೂ ಕೊಟ್ಟು ಪೇಚಿಗೆ ಸಿಕ್ಕ ಆರ್.ಅಶ್ವಿನ್

ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಎಜಾಜ್ ಪಟೇಲ್ ಬೌಲಿಂಗ್​ನ ಎಸೆತವೊಂದಕ್ಕೆ ಟೀಂ ಇಂಡಿಯಾ ಆಟಗಾರ ಆರ್.ಅಶ್ವಿನ್ ಕ್ಲೀನ್ ಬೌಲ್ಡ್ ಆದರು. ಅಂಪೈರ್ ಔಟೆಂದು ಬೆರಳೆತ್ತಿದರು. ನೋಡನೋಡುತ್ತಿದ್ದಂತೆಯೇ ಆರ್ ಅಶ್ವಿನ್ ಕಣ್ಣೆತ್ತಿದ್ದವರೇ ಅಂಪೈರ್​ಗೆ ರಿವ್ಯೂ ಹೇಳಿದರು. ಬೌಲ್ಡ್ ಆದರೂ ಅಶ್ವಿನ್ ರಿವ್ಯೂಗೆ ಸೂಚಿಸಿದ್ದು, ಕಾಮೆಂಟೇಟರ್​ಗಳನ್ನೂ ಸೋಜಿಗೊಳಿಸಿತು. ಬಳಿಕ ತಾವು ಬೌಲ್ಡ್‌ ಆಗಿದ್ದು ಕಂಡು ತಮ್ಮ ರಿವ್ಯೂ ವಾಪಸ್ ಪಡೆದುಕೊಂಡು ಪೆವಿಲಿಯನ್​ಗೆ ಮರಳಿದರು.

ಈ ಪ್ರಸಂಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರ್.ಅಶ್ವಿನ್ ರಿವ್ಯೂ ಕೊಟ್ಟ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಜನರಿಗೆ ಒಳ್ಳೆಯ ಮೀಮ್​ಗಳಿಗೆ ಸರಕಾಯಿತು. ಕ್ಲೀನ್ ಬೌಲ್ಡ್ ಆದರೂ ರಿವ್ಯೂ ಕೊಟ್ಟು ಆರ್ ಅಶ್ವಿನ್ ಇತಿಹಾಸ ನಿರ್ಮಿಸಿದರು ಎಂದು ಒಬ್ಬರು ಕಾಮೆಂಟ್ ಕೊಟ್ಟಿದ್ದಾರೆ. ಕ್ಕೀನ್ ಬೌಲ್ಡ್ ಆದರೂ ಔಟ್ ತೀರ್ಪು ರಿವ್ಯೂ ಮಾಡಲು ಗಂಡೆದೆ ಬೇಕೇ ಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ. ಇನ್ನೂ ಹಲವರು ವಿವಿಧ ರೀತಿಯಲ್ಲಿ ಹಾಸ್ಯ ಮಾಡಿ ಟ್ವೀಟ್ ಹಾಕಿದ್ದಾರೆ.

Edited By : Vijay Kumar
PublicNext

PublicNext

04/12/2021 10:58 pm

Cinque Terre

55.66 K

Cinque Terre

2

ಸಂಬಂಧಿತ ಸುದ್ದಿ