ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಭಾರತ ತಂಡದ ಇಂದಿನ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಮಯಾಂಕ್ ಅಗರವಾಲ್ ಅತ್ಯುತ್ತಮ ಶತಕ ಸಿಡಿಸಿ ಕ್ರಿಕೆಟ್ ಪ್ರಿಯರ ಹೃದಯ ಗೆದ್ದಿದ್ದಾರೆ.
ವಾಂಖೇಡೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತ್ತು. ಅದರಂತೆ ಆರಂಭಿಕ ಆಟಗಾರ ಮಯಾಂಕ್ ಅಗರವಾಲ್ ಶತಕ ಸಿಡಿಸಿ ಬೀಗಿದ್ದಾರೆ.ಮಯಾಂಕ್ ಕಿರು ಟೆಸ್ಟ್ ಜೀವನದ ನಾಲ್ಕನೆಯ ಶತಕ ಇದಾಗಿದೆ.
ಮಯಾಂಕ್ ಪಂದ್ಯದ 59 ನೇ ಓವರ್ ನಲ್ಲಿ ಡೆರಿ ಮಿಚೆಲ್ ಮೊದಲ ಎಸೆತದಲ್ಲಿ ಸುಂದರವಾದ ಕವರ್ ಡ್ರೈವ್ ಮಾಡಿ ಫೋರ್ ಹೊಡೆದರು. ಇದರೊಂದಿಗೆ ಮಯಾಂಕ್ ತಮ್ಮ ಟೆಸ್ಟ್ ವೃತ್ತಿಯ ನಾಲ್ಕನೆ ಶತಕ ಪೂರೈಸಿದರು. ಮಯಾಂಕ್ ಅಗರವಾಲ್ 196 ಎಸೆತಗಳನ್ನ ಆಡಿ, 13 ಬೌಂಡರಿ ಮತ್ತು 3 ಸಿಕ್ಸರ್ ಗಳನ್ನ ಹೊಡೆದಿದ್ದಾರೆ.
PublicNext
03/12/2021 07:50 pm