ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಎರಡನೇ ಅಂತಿಮ ನಿರ್ಣಾಯಕ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾದ ಮೂವರು ಪ್ರಮುಖ ಆಟಗಾರರು ಹೊರಗುಳಿದಿದ್ದಾರೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಆರಂಭವಾಗಬೇಕಿರೋ ಪಂದ್ಯದಲ್ಲಿ ರವೀಂದ್ರ ಜಡೇಜಾ,ಇಶಾಂತ್ ಶರ್ಮಾ,ಅಜಿಂಕ್ಯಾ ರಹಾನೆ ಅಲಭ್ಯವಾಗಿದ್ದಾರೆ.
ಇಶಾಂತ್ ಶರ್ಮಾ,ಅಜಿಂಕ್ಯಾ ರಹಾನೆ,ರವೀಂದ್ರ ಜಡೇಜಾ, ಗಾಯಗೊಂಡಿದ್ದಾರೆ. ಹಾಗಾಗಿಯೇ ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಿಂದ ಹೊರಗುಳಿದಿದ್ದಾರೆ.
ಮೊದಲ ಟೆಸ್ಟ್ ನ ಅಂತಿಮ ದಿನ ವೇಗಿ ಇಶಾಂತ್ ಶರ್ಮಾ ಅವರ ಎಡಗೈಯ ಕಿರು ಬೆರಳಿಗೆ ಗಾಯವಾಗಿತ್ತು. ರವೀಂದ್ರ ಜಡೇಜಾ ಬಲ ಮುಂಗೈ ಗಾಯದಿಂದ ಬಳಲುತ್ತಿದ್ದಾರೆ. ಅಜಿಂಕ್ಯಾ ರಹಾನೆ ಫೀಲ್ಡಿಂಗ್ ಮಾಡುವಾಗ ಮಂಡಿರಜ್ಜು ನೋವಿಗೆ ತುತ್ತಾಗಿದ್ದಾರೆ.
ಸದ್ಯ ಬಿಸಿಸಿಐ ಮೆಡಿಕಲ್ ತಂಡ ಸೂಕ್ಷ್ಮವಾಗಿಯೇ ಇವರ ಆರೋಗ್ಯವನ್ನ ನೋಡಿಕೊಳ್ಳುತ್ತಿದೆ ಎಂದು ಬಿಬಿಸಿಐ ತನ್ನ ಅಧಿಕೃತ ಟ್ವಿಟರ್ ಪೇಜ್ ನಲ್ಲಿ ಹೇಳಿದೆ.
ಸುಮಾರು 10.30 ಕ್ಕೆ ಈ ನಿರ್ಣಾಯಕ ಪಂದ್ಯ ಆರಂಭವಾಗಬೇಕಿತ್ತು. ಆದರೆ ಮಳೆ ಬಂದ ಕಾರಣ 12 ಗಂಟೆ ಹೊತ್ತಿಗೆ ಟಾಸ್ ಆಗಲಿದೆ.
PublicNext
03/12/2021 11:52 am