ನವದೆಹಲಿ: ಪಂಜಾಬ್ ಕಿಂಗ್ಸ್ ತಂಡದಿಂದ ಕ್ಯಾಪ್ಟನ್ ಕೆ.ಎಲ್ ರಾಹುಲ್ ಹೊರ ಹೋದ ಬೆನ್ನಲ್ಲೇ ಸಹಾಯಕ ಕೋಚ್ ಕೂಡ ಪಂಜಾಬ್ ಕಿಂಗ್ಸ್ ತೊರೆದು ಶಾಕ್ ನೀಡಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡದ ಸಹಾಯಕ ಕೋಚ್ ಆ್ಯಂಡಿ ಫ್ಲವರ್ ರಾಜೀನಾಮೆ ನೀಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ಮುನ್ನವೇ ಪಂಜಾಬ್ ಕಿಂಗ್ಸ್ ತಂಡ ಮಯಾಂಕ್ ಅಗರ್ವಾಲ್ ಹಾಗೂ ಅರ್ಷದೀಪ್ ಸಿಂಗ್ ಅವರನ್ನು ಉಳಿಸಿಕೊಂಡಿದೆ. ಆದರೀಗ ಇಬ್ಬರು ಆಟಗಾರರ ರಿಟೈನ್ ಬೆನ್ನಲ್ಲೇ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.
PublicNext
02/12/2021 09:22 pm