ಕಾನ್ಪುರ: ಇಂದಿನಿಂದ ಭಾರತ ನ್ಯೂಜಿಲೆಂಡ್ ಟೆಸ್ಟ್ ಸರಣಿ ಶುರುವಾಗಲಿದೆ. ಭಾರತದಲ್ಲಿ ಕೇವಲ ಎರಡೇ ಟೆಸ್ಟ್ ಗೆದ್ದಿರುವ, ಕಳೆದೆರಡು ಪ್ರವಾಸಗಳಲ್ಲಿ ಎಲ್ಲ ಟೆಸ್ಟ್ ಗಳಲ್ಲಿ ಸೋತ ಹಿನ್ನಡೆಯ ನಡುವೆ ಪ್ರವಾಸಿ ನ್ಯೂಜಿಲೆಂಡ್ ತಂಡವೀಗ ‘ಟೆಸ್ಟ್ ವಿಶ್ವ ಚಾಂಪಿಯನ್’ ಪಟ್ಟಕ್ಕೆ ತಕ್ಕ ನಿರ್ವಹಣೆ ತೋರುವ ಛಲದಲ್ಲಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ಮಹತ್ವಾಕಾಂಕ್ಷೆಯೊಂದಿಗೆ ಭಾರತ ತಂಡ 2 ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿದೆ.
ನಾಯಕ ವಿರಾಟ್ ಕೊಹ್ಲಿ ಸಹಿತ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನಡುವೆಯೂ ಭಾರತ ತಂಡ ತವರಿನ ಲಾಭವನ್ನು ಹೊಂದಿದ್ದು, ಗ್ರೀನ್ ಪಾರ್ಕ್ ನಲ್ಲಿ ಇಂದಿನಿಂದ (ಗುರುವಾರ) ನಡೆಯಲಿರುವ ಮೊದಲ ಟೆಸ್ಟ್ನಲ್ಲಿ ಅದನ್ನು ಗೆಲುವಾಗಿ ಪರಿವರ್ತಿಸುವ ತವಕದಲ್ಲಿದೆ.
ಹಂಗಾಮಿ ನಾಯಕತ್ವದ ಜತೆಗೆ ಬ್ಯಾಟಿಂಗ್ ನಲ್ಲೂ ಮಿಂಚಬೇಕಾದ ಸವಾಲು ಅಜಿಂಕ್ಯ ರಹಾನೆ ಮುಂದಿದೆ. ಮತ್ತೋರ್ವ ಟೆಸ್ಟ್ ತಜ್ಞ ಬ್ಯಾಟರ್ ಹಾಗೂ ಹಂಗಾಮಿ ಉಪನಾಯಕ ಚೇತೇಶ್ವರ ಪೂಜಾರ ಕೂಡ ರನ್ ಬರ ನೀಗಿಸುವ ಒತ್ತಡದಲ್ಲಿದ್ದಾರೆ.
ಪಂದ್ಯ ಆರಂಭ: ಬೆಳಗ್ಗೆ 9.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಮುಖಾಮುಖಿ: 60
ಭಾರತ: 21
ನ್ಯೂಜಿಲೆಂಡ್: 13
ಡ್ರಾ: 26
ಭಾರತದಲ್ಲಿ: 34
ಭಾರತ: 16
ನ್ಯೂಜಿಲೆಂಡ್: 2
ಡ್ರಾ: 16
ಸಂಭಾವ್ಯ ತಂಡ ಭಾರತ : ಮಯಾಂಕ್ ಅಗರ್ವಾಲ್, ಶುಭಮಾನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ನಾಯಕ), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ವೃದ್ಧಿಮಾನ್ ಸಾಹ (ವಿ.ಕೀ), ಆರ್. ಅಶ್ವಿನ್, ಅಕ್ಷರ್ ಪಟೇಲ್, ಉಮೇಶ್ ಯಾದವ್, ಮೊಹಮದ್ ಸಿರಾಜ್/ಇಶಾಂತ್ ಶರ್ಮ.
ಸಂಭಾವ್ಯ ತಂಡ ನ್ಯೂಜಿಲೆಂಡ್: ಟಾಮ್ ಲಾಥಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡಲ್ (ವಿ.ಕೀ), ಮಿಚೆಲ್ ಸ್ಯಾಂಟ್ನರ್/ಕೈಲ್ ಜೇಮಿಸನ್, ಟಿಮ್ ಸೌಥಿ, ನೀಲ್ ವ್ಯಾಗ್ನರ್, ವಿಲ್ ಸೋಮರ್ವಿಲ್, ಅಜಾಜ್ ಪಟೇಲ್.
PublicNext
25/11/2021 07:40 am