ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಕೆ.ಎಲ್ ರಾಹುಲ್ ಔಟ್! ಸೂರ್ಯಕುಮಾರ್ ಯಾದವ್ ಇನ್!

ಕಾನ್ಪುರ್ : ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಹೊರಗುಳಿಯಲಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ನ್ಯೂಜಿಲೆಂಡ್ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಕೆ.ಎಲ್ ರಾಹುಲ್ ಹೊರ ನಡೆದಿದ್ದಾರೆ. ಆ ಮೂಲಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಲಭ್ಯತೆಯ ನಡುವೆ ಇದೀಗ ಕೆ.ಎಲ್ ರಾಹುಲ್ ಹೊರ ನಡೆದಿರುವುದು ಟೀಮ್ ಇಂಡಿಯಾಗೆ ಭಾರಿ ಹಿನ್ನಡೆ ತಂದಿದೆ.

ಇದೀಗ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೆ.ಎಲ್ ರಾಹುಲ್ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಗೆ ಸ್ಥಾನ ಕಲ್ಪಿಸಲಾಗಿದೆ.

ಗುರುವಾರ ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮೊದಲನೇ ಟೆಸ್ಟ್ ಪಂದ್ಯವನ್ನು ಆರಂಭಿಸಲಿವೆ.

ಅಂದಹಾಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಹಾಗೂ ಶುಭಮನ್ ಗಿಲ್ ಸೇರಿ ಒಟ್ಟು ಮೂವರು ಆರಂಭಿಕ ಬ್ಯಾಟ್ಸ್ ಮನ್ ಗಳನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಕೆ.ಎಲ್ ಗಾಯದಿಂದಾಗಿ ಟೆಸ್ಟ್ ಸರಣಿಯಿಂದ ಹೊರ ನಡೆದಿರುವ ಹಿನ್ನೆಲೆಯಲ್ಲಿ ಮತ್ತೊರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಗೂ ಶುಭಮನ್ ಗಿಲ್ ಓಪನಿಂಗ್ ಬ್ಯಾಟ್ ಮಾಡುವುದು ಬಹುತೇಕ ಖಚಿತವಾಗಿದೆ.

ಮೊದಲನೇ ಟೆಸ್ಟ್ ಪಂದ್ಯಕ್ಕೆ ಭಾರತ ಸಂಭಾವ್ಯ ಪಟ್ಟಿ

1. ಮಯಾಂಕ್ ಅಗರ್ವಾಲ್

2. ಶುಭಮನ್ ಗಿಲ್

3. ಚೇತೇಶ್ವರ್ ಪೂಜಾರ

4. ಶ್ರೇಯಸ್ ಅಯ್ಯರ್

5. ಅಜಿಂಕ್ಯ ರಹಾನೆ(ನಾಯಕ)

6. ವೃದ್ದಿಮಾನ್ ಸಹಾ/ಕೆ.ಎಎಸ್ ಭರತ್(ವಿ.ಕೀ)

7. ರವೀಂದ್ರ ಜಡೇಜಾ

8. ಆರ್ ಅಶ್ವಿನ್

9. ಅಕ್ಷರ್ ಪಟೇಲ್/ಉಮೇಶ್ ಯಾದವ್

10. ಮೊಹಮ್ಮದ್ ಸಿರಾಜ್

11. ಇಶಾಂತ್ ಶರ್ಮಾ

Edited By : Nirmala Aralikatti
PublicNext

PublicNext

23/11/2021 05:17 pm

Cinque Terre

29.16 K

Cinque Terre

0

ಸಂಬಂಧಿತ ಸುದ್ದಿ