ರಷ್ಯಾ: ರಷ್ಯಾದ ಬಿಶ್ಕೆಕ್ ನಲ್ಲಿ ನಡೆದ ವರ್ಲ್ಡ್ ಪವರ್ ಲಿಫ್ಟಿಂಗ್ ಹಾಗೂ ಎಡಬ್ಲ್ಯೂಪಿಸಿ ಕ್ರೀಡಾಕೂಟ ವಿಭಾಗದಲ್ಲಿ (World Powerlifting and AWPC Games) ಭಾರತದ ಕಿರಣ್ ಕುಮಾರ್ ರೆಡ್ಡಿ 5 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ!
ಈ ಕ್ರೀಡಾಕೂಟದಲ್ಲಿ 165.5 ಕೆ.ಜಿ ಬೆಂಚ್, ಸ್ಕ್ವಾಡ್ಸ್ 200 ಕೆ.ಜಿ. ಡೆಡ್ಲಿ ಟು 250 ಕೆ.ಜಿ. ಒಪನ್ ಕ್ಯಾಟಗಿರಿ 167, ಡೆಡ್ಲಿ ಟು ಬೆಂಚ್ ಓಪನ್ 250 ಕೆ.ಜಿ. ಪವರ್ ಲಿಫ್ಟಿಂಗ್ ವಿಭಾಗದಲ್ಲಿ 46 ದೇಶಗಳ ಪುರುಷರು- ಮಹಿಳೆಯರ ಸಹಿತ 700 ಕ್ರೀಡಾಪಟುಗಳು ಭಾಗವಹಿಸಿದ್ದರು.
ಕನ್ನಡಿಗ ಕಿರಣ್ ಕುಮಾರ್ ರೆಡ್ಡಿ ಬೆಂಗಳೂರಿನ ಮಹದೇವಪುರ ನಿವಾಸಿ ಹಾಗೂ ನ್ಯೂ ಹ್ಯಾರಿಜೋನ್ ಕಾಲೇಜ್ ವಿದ್ಯಾರ್ಥಿ.
ಭಾರತದ ವಿವಿಧ ರಾಜ್ಯಗಳ ಆರು ಕ್ರೀಡಾಪಟುಗಳು ಹಾಗೂ ಕರ್ನಾಟಕದಿಂದ ಕಿರಣ್ ಮಾತ್ರ ಭಾಗವಹಿಸಿದ್ದರು.
ಯಾವುದೇ ರೀತಿಯ ಔಷಧ ಪಡೆಯದೆ ನೈಸರ್ಗಿಕವಾಗಿ ದೇಹ ಹುರಿಗೊಳಿಸಿರುವ ಕಿರಣ್ ಕುಮಾರ್, ನ್ಯಾಚುರಲ್ ಬಾಡಿ ಬಿಲ್ಡಿಂಗ್ ನ್ಯಾಷನಲ್ ಚಾಂಪಿಯನ್ ಶಿಪ್ನಲ್ಲಿಯೂ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ.
2018ರಲ್ಲಿ ಅಂತರ್ ರಾಜ್ಯ ಕ್ರೀಡಾಕೂಟದಲ್ಲಿ 18ರ ಕಿರಿಯ ವಯಸ್ಸಿನಲ್ಲೇ ಗೋಲ್ಡ್ ಮೆಡಲ್ ಪಡೆದ ಕೀರ್ತಿ ಇವರ ಹೆಸರಲ್ಲಿದೆ. 2021ರಲ್ಲಿ (INB) ಏಷ್ಯಾ ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಒಂದು ರನ್ನರ್ ಅಪ್ ಮತ್ತು ಮೂರು ಕಂಚಿನ ಪದಕ ಗಳಿಸಿದ್ದಾರೆ. 2020 ರಲ್ಲಿ ಬೆಂಗಳೂರಿನ ನ್ಯೂ ಹ್ಯಾರಿಜಾನ್ ಕಾಲೇಜ್‌ನಲ್ಲಿ ಬೆಂಗಳೂರು ನಾರ್ತ್ ಯೂನಿವರ್ಸಿಟಿ ನಡೆಸಿದ ನೈಸರ್ಗಿಕ ದೇಹದಾಡ್ಯ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಜಯಿಸಿದ್ದಾರೆ.
PublicNext
23/11/2021 09:30 am