ನವದೆಹಲಿ: ದೇಶೀಯ ಕ್ರಿಕೆಟ್‌ನ ಸಾಂಪ್ರದಾಯಿಕ ಎದುರಾಳಿಗಳಾದ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಇಂದು (ಸೋಮವಾರ) ಮಧ್ಯಾಹ್ನ 12 ಗಂಟೆಗೆ ಎದುರಾಗಲಿವೆ.
ಫಿರೋಜ್ ಷಾ ಕೋಟ್ಲಾ ಆವರಣದ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ 'ಸದರ್ನ್ ಡರ್ಬಿ' ದೇಶೀಯ ಕ್ರಿಕೆಟ್ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಕರ್ನಾಟಕ ಈ ಟೂರ್ನಿಯಲ್ಲಿ ಈ ವರೆಗೆ ಎರಡು ಬಾರಿ ಫೈನಲ್ ಪ್ರವೇಶಿಸಿದ್ದು, ಎರಡು ಬಾರಿಯೂ ಚಾಂಪಿಯನ್ ಆಗಿ ಹೊರಹೊಮ್ಮಿದ ಹೆಗ್ಗಳಿಕೆ ಹೊಂದಿದೆ. 2019ರಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಕರ್ನಾಟಕ ತಂಡ 1 ರನ್‌ನಿಂದ ತಮಿಳುನಾಡು ತಂಡವನ್ನು ಮಣಿಸಿ ಪ್ರಶಸ್ತಿ ಜಯಿಸಿತ್ತು. ತಮಿಳುನಾಡು ತಂಡ ಹಾಲಿ ಚಾಂಪಿಯನ್ ಆಗಿದ್ದರೂ ಎರಡು ವರ್ಷಗಳ ಹಿಂದೆ ಅನುಭವಿಸಿದ್ದ ಸೋಲು ಇನ್ನೂ ಕಾಡುತ್ತಿದೆ. ಯಾರೇ ಗೆದ್ದರೂ 3ನೇ ಬಾರಿ ಟ್ರೋಫಿ ಜಯಿಸಿದಂತಾಗುತ್ತದೆ.
PublicNext
22/11/2021 08:38 am