ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs NZ | T20: ಪಟೇಲ್ಸ್ ಕಮಾಲ್- ಕಿವೀಸ್ ಗೆ ಕ್ಲೀನ್ ಸ್ವೀಪ್ ಶಾಕ್

ಕೋಲ್ಕತ್ತಾ: ನಾಯಕ ರೋಹಿತ್ ಶರ್ಮಾ ಅರ್ಧಶತಕ, ಅಕ್ಷರ ಪಟೇಲ್ ಹಾಗೂ ಹರ್ಷಲ್ ಪಟೇಲ್ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 73 ರನ್‌ಗಳಿಂದ ಗೆದ್ದು ಬೀಗಿದೆ. ಇದರೊಂದಿಗೆ ಕಿವೀಸ್ ಪಡೆಗೆ ಕ್ಲೀನ್ ಸ್ವೀಪ್ ಶಾಕ್ ನೀಡಿದೆ‌.

ಕೋಲ್ಕತ್ತಾ ಈಡನ್ ಗಾರ್ಡನ್ಸ್ ‌ನಲ್ಲಿ ನಡೆದ ಕಿವೀಸ್ ವಿರುದ್ಧ 3 ಪಂದ್ಯಗಳ ಸರಣಿಯ ಇಂದಿನ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡರು‌. ನಾಯಕ ಆಯ್ಕೆಯನ್ನು ಆಟಗಾರರು ಸಮರ್ಥಿಸಿಕೊಂಡರು. ಅದರಂತೆ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 184 ರನ್ ಚಚ್ಚಿತು. ತಂಡದ ಪರ ನಾಯಕ ರೋಹಿತ್ ಶರ್ಮಾ 56 ರನ್ ಗಳಿಸಿದ್ದರು.

ಬಳಿಕ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡವು 17.2 ಓವರ್‌ಗಳಲ್ಲಿ ಎಲ್ಲಾ 10 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಲು ಶಕ್ತವಾಯಿತು. ಕಿವೀಸ್ ಪರ ಮಾರ್ಟಿನ್ ಗಪ್ಟಿಲ್ 51 ರನ್ ಗಳಿಸಿದರು.

ಇನ್ನು ಭಾರತದ ಪರ ಅಕ್ಷರ್ ಪಟೇಲ್ 3 ವಿಕೆಟ್ ಕಿತ್ತರೆ, ಹರ್ಷಲ್ ಪಟೇಲ್ 2 ವಿಕೆಟ್, ಯಜುವೇಂದ್ರ ಚಹಲ್, ವೆಂಕಟೇಶ್ ಅಯ್ಯರ್ ಹಾಗೂ ದೀಪಕ್ ಚಾಹರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

Edited By : Nirmala Aralikatti
PublicNext

PublicNext

21/11/2021 10:40 pm

Cinque Terre

56.26 K

Cinque Terre

1

ಸಂಬಂಧಿತ ಸುದ್ದಿ