ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಪ್ರತಿ ಆಟಗಾರನನ್ನ ಚಾಂಪಿಯನ್ ಮಾಡುವ ಕಲೆ ಗುರು ದ್ರಾವಿಡ್ ಬಳಿ ಇದೆ'

ನವದೆಹಲಿ: ಪ್ರತಿ ಆಟಗಾರನನ್ನ ಚಾಂಪಿಯನ್ ಮಾಡುವ ಕಲೆ ಗುರು ರಾಹುಲ್ ದ್ರಾವಿಡ್ ಬಳಿ ಇದೆ ಎಂದು ಕನ್ನಡಿಗ, ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ಕೆ.ಎಲ್.ರಾಹುಲ್ ಹೇಳಿದ್ದಾರೆ.

ಟೀಂ ಇಂಡಿಯಾ ನವೆಂಬರ್ 17ರಿಂದ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು, ಮೊದಲ ಪಂದ್ಯ ಜೈಪುರದಲ್ಲಿ ನಡೆಯಲಿದೆ. ಈ ಸರಣಿಗೂ ಮುನ್ನ ಟೀಂ ಇಂಡಿಯಾದ ನೂತನ ಉಪನಾಯಕ ಕೆಎಲ್ ರಾಹುಲ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನೂತನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಹಾಡಿ ಹೊಗಳಿದ್ದಾರೆ.

ರಾಹುಲ್ ದ್ರಾವಿಡ್ ಎಷ್ಟು ದೊಡ್ಡ ಹೆಸರು ಎಂದು ನಮಗೆಲ್ಲರಿಗೂ ತಿಳಿದಿದೆ. ಅವರಿಂದ ಸಾಕಷ್ಟು ಕಲಿಯಲು ನಮಗೆ ಉತ್ತಮ ಅವಕಾಶವಿದೆ. ಕೋಚಿಂಗ್ ಬಗ್ಗೆ ಮಾತನಾಡುತ್ತಾ, ಅವರ ಕೋಚಿಂಗ್ ಅಡಿಯಲ್ಲಿ ನಾನು ಭಾರತ ಎ ಪರ ಕೆಲವು ಪಂದ್ಯಗಳನ್ನು ಆಡಿದ್ದೇನೆ. ದ್ರಾವಿಡ್ ಅವರ ವಿಶೇಷತೆಯೆಂದರೆ ಅವರು ಆಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರು ಡ್ರೆಸ್ಸಿಂಗ್ ಕೋಣೆಯ ವಾತಾವರಣವನ್ನು ಯಾವಾಗಲೂ ತಂಪಾಗಿರಿಸುತ್ತಾರೆ. ಜೊತೆಗೆ ಯಾವಾಗಲೂ ತಂಡದ ಬಗ್ಗೆ ಯೋಚಿಸುತ್ತಾರೆ. ರಾಹುಲ್ ದ್ರಾವಿಡ್ ಅವರ ಈ ಗುಣ ಅವರನ್ನು ಇತರರಿಗಿಂತ ಭಿನ್ನವಾಗಿಸುತ್ತದೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ಬಹುತೇಕ ಆಟಗಾರರು ರಾಹುಲ್ ದ್ರಾವಿಡ್ ಅವರ ಕೋಚಿಂಗ್‌ನಲ್ಲಿ ಮುನ್ನಡೆದಿದ್ದಾರೆ ಎಂದು ಕೆ.ಎಲ್. ರಾಹುಲ್ ಹೇಳಿದ್ದಾರೆ.

ರಾಹುಲ್ ದ್ರಾವಿಡ್ ಅವರನ್ನು ಬಹಳ ಸಮಯದಿಂದ ನಾನು ತಿಳಿದಿರುವುದು ನನ್ನ ಅದೃಷ್ಟ. ನಾನು ಚಿಕ್ಕವನಿದ್ದಾಗ ಅವರಂತೆ ಆಟವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಅವರು ಕರ್ನಾಟಕದಲ್ಲಿ ನಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರು ಟೀಮ್ ಇಂಡಿಯಾಗೆ ಸೇರಿದ ನಂತರ, ಈಗ ನಾವು ಅವರಿಂದ ಹೆಚ್ಚಿನದನ್ನು ಕಲಿಯುವ ಅವಕಾಶವನ್ನು ಪಡೆಯುತ್ತೇವೆ ಎಂದು ಗುರುಗಳ ಗುಣಗಾಣ ಮಾಡಿದ್ದಾರೆ.

Edited By : Vijay Kumar
PublicNext

PublicNext

16/11/2021 08:03 am

Cinque Terre

36.07 K

Cinque Terre

1

ಸಂಬಂಧಿತ ಸುದ್ದಿ